ಮೈಸೂರು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಚೀಫ್ ಜನರಲ್ ಮ್ಯಾನೇಜರ್ ಅನಂತ ಹೆಗ್ಡೆ ಮತ್ತು ಗೋಪಾಲಕೃಷ್ಣರವರನ್ನು ಜುಲೈ 24 ರಂದು ಭೇಟಿ ಮಾಡಲಾಯಿತು. ಸೇವಾಧಾಮ ಸೇವಾಭಾರತಿಯ ಸೇವಾಕಾರ್ಯಗಳ ಬಗ್ಗೆ ಅವರಿಗೆ ವಿವರಿಸಿ ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕಾಗಿ ತಮ್ಮ ಬ್ಯಾಂಕ್ ನ CSR ನ ಮೂಲಕ ಸಹಕರಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸೇವಾಧಾಮ ಸಂಸ್ಥೆಯ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಮತ್ತು ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ, ಅನುಸರಣೆ ಮತ್ತು ಹಣಕಾಸು ವ್ಯವಸ್ಥಾಪಕ ಮೋಹನ ಎಸ್ ಉಪಸ್ಥಿತರಿದ್ದರು.