ಮೂಡುಬಿದಿರೆಯನ್ನು ಸಂಪರ್ಕಿಸುವ ಎಲ್ಲಾ ರಾಜ್ಯ ಹೆದ್ದಾರಿಯ ಪ್ರಯಾಣಿಕರಿಗೆ, ಸಾವಿರಾರು ವಾಹನಗಳಿಗೆ ತೀವ್ರ ಅಡಚಣೆ

0
172


ವರದಿ ರಾಯಿ ರಾಜ ಕುಮಾರ
ಮೂಡುಬಿದರೆಯನ್ನು ಸಂಪರ್ಕಿಸುವ ಎಲ್ಲಾ ಕಡೆಯ ರಾಜ್ಯ ಹೆದ್ದಾರಿ ಹೆಚ್ಚಾಗಿ ತೀವ್ರ ತಿರುವಿನಿಂದ ಕೂಡಿರುತ್ತದೆ . ಇಷ್ಟು ಅಪಾಯಕಾರಿಯಾದ ರಸ್ತೆಯಲ್ಲಿ ಕೂಡ ಕಳೆದ ಹಲವಾರು ತಿಂಗಳುಗಳಿಂದ ಕರ್ನಾಟಕ ನೀರು ಸರಬರಾಜು ಮಂಡಳಿಯವರು ತಿರುವುಗಳಲ್ಲಿ ಅರೆ ಬರೆ ಕಾಮಗಾರಿಯನ್ನು ನಡೆಸಿ ಇದ್ದಂತೆಯೇ ಬಿಟ್ಟು ಹೋಗಿರುತ್ತಾರೆ .


ತೀವ್ರ ತಿರುವು ಇರುವಲ್ಲಿ ಕೆಲವಾರು ಕಡೆ ಅರ್ಧದಷ್ಟು ರಸ್ತೆಯನ್ನು ನುಂಗಿರುವಂತೆ ಕಾಮಗಾರಿಯನ್ನು ಅರ್ಧದಲ್ಲಿ ನಿಲ್ಲಿಸಿ ತೆರಳಿದ್ದಾರೆ ತೀವ್ರ ತಿರುವನ್ನು ಹೊಂದಿರುವ ಅತ್ಯಂತ ಅಪಾಯಕಾರಿಯದ ಪ್ರದೇಶದಲ್ಲಿ ಈ ರೀತಿಯಲ್ಲಿ ಅರೆಬರೆ ಕಾಮಗಾರಿಯನ್ನು ನಡೆಸಿ ಪ್ರಯಾಣಿಕರಿಗೆ , ವಾಹನಗಳವರಿಗೆ ತೀವ್ರ ತೊಂದರೆಯನ್ನು ಉಂಟು ಮಾಡಿರುವದು ತೀವ್ರ ಖಂಡನೀಯ ಎಂದು ಹಲವಾರು ಮಂದಿ ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here