ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯು ಅಸಮರ್ಪಕ ಜೋಡಣೆಯಿಂದ ಸೇರಿದಂತೆ ಬಾವಿಗಳ ಕುಡಿಯುವ ನೀರು ಮಾಲಿನ್ಯ ಉಂಟಾಗಿದ್ದು, ಇದನ್ನು ತಡೆಯಲು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಮಂಗಳೂರು ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ನೀಡಲು ಸರಕಾರದ ಮುಂದೆ ಯೋಜನೆ ಇದೆಯೇ ಎಂಬ ವಿಧಾನ ಪರಿಷತ್ತಿನ ಶಾಸಕ ಐವನ್ ಡಿʼಸೋಜಾರವರ ಪ್ರಶ್ನೆಗೆ ಮಾನ್ಯ ನಗರಾಭಿವೃದ್ದಿ ಸಚಿವ ಬಿ.ಎಸ್. ಸುರೇಶ್ ರವರ ಉತ್ತರ.
ಎಞ್ಯನ್ ಅಭಿವೃದ್ದಿ ಬ್ಯಾಂಕ್ (ಎಡಿಬಿ) ಮತ್ತು ಅಮೃತ್ ನೆರವಿನ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಹೂಡಿಕೆ ಕಾರ್ಯಕ್ರಮ (ಜಲಸಿರಿ) ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೂ.316.50 ಕೋಟಿಗಳ ಮೊತ್ತದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿಒಟ್ಟು 131.65ಕಿ.ಮೀ ಒಳಚರಂಡಿ ಕೊಳವೆ ಜಾಲ ಜೆಪ್ಪು ಬಪ್ಪಾಲ್ ವೆಟ್ವೆಲ್, ತಿರುವೇಲ್ ವೆಟ್ವೆಲ್, ಎಸ್.ಜೆಡ್ ಪ್ರದೇಶ ಹಾಗೂ ಕೋಡಿ ಕೆರೆ ಬಳಿ ಒಟ್ಟು 4 ವೆಟ್ವೆಲ್ ಗಳನ್ನು ಒಂಪಿಂಗ್ ಮೆಷಿನರಿ ಹಾಗೂ ಕೋಡಿಕೆರೆ ಬಳಿ 1.5 ಎಂ.ಎಲ್.ಡಿ ತ್ಯಾಜ್ಯ ನೀರು ಶುದ್ದೀಕರಣಗಾರ ಇತ್ಯಾದಿ ಕಾಮಗಾರಿಗಳನ್ನು ದಿನಾಂಕ:31-05-2026ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ವಿವರವನ್ನು ಅನುಬಂಧ-1ರಲ್ಲಿ ನೀಡಲಾಗಿದೆ.ಎಂದು ಸಚಿವರು ಉತ್ತರಿಸಿದ್ದಾರೆ.
