ನಮ್ಮ ನಾಡ ಒಕ್ಕೂಟ ಬ್ರಹ್ಮಾವರ ತಾಲೂಕು ನೂತನ ಅಧ್ಯಕ್ಷರಾಗಿ ಶಾಕಿರ್ ಎಂ ಹಾವಂಜೆ ಆಯ್ಕೆ

0
27

ನಮ್ಮ ನಾಡ ಒಕ್ಕೂಟ ಬ್ರಹ್ಮಾವರ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆ ಮದರ್ ಪ್ಯಾಲೇಸ್ ಹೋಟೆಲ್ ನಲ್ಲಿ ಇತ್ತೀಚಿಗೆ ನಡೆಯಿತು.ಅಧ್ಯಕ್ಷತೆಯನ್ನು ಇಲ್ಯಾಸ್ ಬೈಂದೂರು ವಹಿಸಿದ್ದರು.
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವ ಯಾಹ್ಯ ರವರು ಪ್ರಾಸ್ತಾವಿಕ ಭಾಷಣ ಮಾಡಿದರು.

ನೂತನ 2026- 27ನೇ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಾಯಿತು. ಅಧ್ಯಕ್ಷರಾಗಿ ಶಾಕಿರ್ ಹಾವಂಜೆ,ಪ್ರದಾನ ಕಾರ್ಯದರ್ಶಿಯಾಗಿ ಆಫ್ತಾಬ್ ಅಬ್ದುಲ್ ರಾಜ್ಜಾಕ್, ಕೊಶಾಧಿಕಾರಿಯಾಗಿ ಜಾಹೀರ್ ಮೊಹಮ್ಮದ್ ಆಲಿ, ಉಪಾಧ್ಯಕ್ಷರಾಗಿ ಅಜ್ಮಾಲ್ ಅಸ್ಸಾದಿ ಹಾಗು ಹಕೀಮ್ಸಲೀಂ , ಸಂಘಟನ ಕಾರ್ಯದರ್ಶಿಯಾಗಿ ಸಲೀಂ ಆಯ್ಕೆಯಾದರು.

ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರ್ ಸಾಹೇಬ್ . ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ , ಜಿಲ್ಲಾ ಪ್ರದಾನ ಕಾರ್ಯದರ್ಶಿ ಫಾಝಿಲ್ ಆದಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಹರೂನ್ ರಶೀದ್ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು. ಶಾಕಿರ್ ಹಾವಂಜೆ ಸ್ವಾಗತಿಸಿದರು, ಅಬು ಮೊಹಮ್ಮದ್ ವಂದಿಸಿದರು .

LEAVE A REPLY

Please enter your comment!
Please enter your name here