ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ : ಉತ್ಸವದ ಪ್ರಯುಕ್ತ ಮೂಡುಬಿದಿರೆಯ ಗ್ರಾಮ ದೇವತೆ ಗೌರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಪ್ರಯುಕ್ತ ಮಹಾಪೂಜೆ, ಕೊಡ್ಯಾಡ್ಕ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಪೊನ್ನೆಚಾರಿ ಶಾರದಾ ಮಹೋತ್ಸವದಲ್ಲಿ ದೇವಿಗೆ ವಿಶೇಷ ಅಲಂಕಾರ, ಸೌಭಾಗ್ಯ ಸೂಕ್ತ ಪಠಣ, ಪಂಚದುರ್ಗ ಹವನ, ಸಾಮೂಹಿಕ ಕುಂಕುಮಾರ್ಚನೆ, ರಂಗ ಪೂಜೆ, ಬಹುಮಾನ ವಿತರಣಾ ಸಮಾರಂಭ ನಡೆಯಿತು.
ವೆಂಕಟರಮಣ ದೇವಸ್ಥಾನದ 36ನೇ ವರ್ಷದ ಶಾರದ ಮಹೋತ್ಸವದಲ್ಲಿ ಚಂಡಿಕಾಹವನ, ಲಕ್ಷ ಕುಂಕುಮಾರ್ಚನೆ, ಭಕ್ತಿ ಗೀತೆ ಸ್ಪರ್ಧೆ, ಹ್ಯಾಪಿ ಸಂಗೀತ ಕಾರ್ಯಕ್ರಮಗಳು ಜರುಗಿದವು. ಸಂತಾನ ಲಕ್ಷ್ಮಿಯ ಅಲಂಕಾರದಲ್ಲಿ ಶ್ರೀದೇವಿ ಶೋಭಿಸುತ್ತಿದ್ದರು. ಅಕ್ಟೋಬರ್ 1 ಬುಧವಾರ ಮೂಡುಬಿದಿರೆ ವೆಂಕಟರಮಣ ಸುಕೃತೀಂದ್ರ ಕಲಾ ಮಂದಿರದಲ್ಲಿ ಬೆಳಗ್ಗೆ ಮುದ್ದು ಶಾರದೆ ಸ್ಪರ್ಧೆ, ಅನ್ನಪೂರ್ಣೇಶ್ವರಿಯ ವಿಶೇಷ ಅಲಂಕಾರದಲ್ಲಿ ದೇವಿ ಶೋಭಿಸುವಳು. ಸಂಜೆ 6 ಗಂಟೆಯಿಂದ ವೈಭವದ ಶೋಭಾ ಯಾತ್ರೆ ನಡೆಯಲಿದೆ ಎಂದು ಶ್ರೀ ವೆಂಕಟರಮಣ ಹಾಗೂ ಹನುಮಂತ ದೇವಾಲಯದ ಆಡಳಿತ ಮುಕ್ತೇಸರ, ಉದ್ಯಮಿ ಜಿ ಉಮೇಶ ಪೈ ತಿಳಿಸಿದ್ದಾರೆ.
.