ಶರಣಿ ರೂಪಾ ಬಿ. ಮುದ್ದೇಬಿಹಾಳ ತಾಲೂಕು ಅಧ್ಯಕ್ಷೆಯಾಗಿ ಆಯ್ಕೆ

0
123

ರೂಪಾ ಬಿ. ನಾಟೀಕಾರ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು, ಶಿಕ್ಷಕಿ, ವಚನಕಾರ್ತಿ, ಕವಯತ್ರಿ, ಹಾಗೂ ಸಂಘಟಕಿಯಾದ ಇವರನ್ನು, ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ “ರಜತ ಸಂಭ್ರಮ “ಪೂರೈಸಿದ ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿ, ಕನ್ನಡ ಶೈಕ್ಷಣಿಕ, ಕನ್ನಡ ಪರ ಚಟುವಟಿಕೆಗಳ ಮೂಲಕ ಕನ್ನಡ ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಈ ಸಂಸ್ಥೆಯ ಮುದ್ದೇಬಿಹಾಳ ತಾಲೂಕಿಗೆ ಅಧ್ಯಕ್ಷರನ್ನಾಗಿ ನಿಯಮಿಸಿದೆ.

ಕನ್ನಡ ಭವನದ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ನೀಡಿ ಗೌರವಿಸಲಾಗಿತ್ತು. ಮುದ್ದೇಬಿಹಾಳ ತಾಲೂಕು ಅಧ್ಯಕ್ಷರಾದ ಇವರು ಸಮಾನ ಮನಸ್ಕ ಕನ್ನಡ ಕವಿ, ಸಾಹಿತಿ, ಕನ್ನಡಪರ ಕಾರ್ಯಕರ್ತರನ್ನು ಒಗ್ಗೂಡಿಸಿ ಸಮಿತಿ ಯೊಂದನ್ನು ರೂಪೀಕರಿಸಿ ಕನ್ನಡ ಕಾರ್ಯಕ್ರಮಗಳನ್ನು “ಕನ್ನಡ ಭವನ ಮುದ್ದೇಬಿಹಾಳ ತಾಲೂಕು “ಎಂಬ ನಾಮದೇಯದಲ್ಲಿ ಕಾರ್ಯ ಪ್ರವೀತ್ತರಾಗಬೇಕೆಂದು ಈ ಪತ್ರದ ಮೂಲಕ ಅಧಿಕಾರ, ಹಾಗೂ ವಿನಂತಿಯನ್ನು ಕಾಸರಗೋಡು ಕನ್ನಡ ಭವನದ ಕೇಂದ್ರ ಸಮಿತಿಯು ವಿನಂತಿಸುತ್ತಿದೆ.

ಎಂದು ಕನ್ನಡ ಭವನ ನುಳ್ಳಿಪ್ಪಾಡಿ, ಪಿ. ಎಂ. ಎಸ್ ರಸ್ತೆಯ ಕಾಸರಗೋಡು ಜಿಲ್ಲೆ ಮೊ. ಸಂಖ್ಯೆ 9037173400. ಇದರ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ, ಸಂಚಾಲಕಿ ಸಂದ್ಯಾ ರಾಣಿ ಟೀಚರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here