ಮೂಡುಬಿದಿರೆ ಗ್ರಾಮ ದೇವತೆ ಗೌರಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವ

0
23

ಮೂಡುಬಿದಿರೆ: ದೊಡ್ಮನೆ ರಸ್ತೆಯ ಗೌರಿ ದೇವಾಲಯ ಅತೀ ಪುರಾತನ ಚಾಲುಕ್ಯರ ಕಾಲದ ದೇವಾಲಯವಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಗ್ರಾಮ ದೇವತೆಯೂ ಹೌದು. ಪ್ರತೀ ವರ್ಷದಂತೆ ಈ ವರ್ಷವೂ ಸೆ. 22 ರಿಂದ ಅಕ್ಟೋಬರ್ 3 ರ ತನಕ ಶರನ್ನವರಾತ್ರಿ ಮಹೋತ್ಸವ ಜರುಗಲಿದೆ.
ವಿಶೇಷವಾಗಿ ‌ಸಪ್ಟಂಬರ್ 27 ರಂದು ಲಲಿತ ಪಂಚಮಿ, 29 ರಂದು ಚಂಡಿಕಾ ಹೋಮ, ಶಾರದಾ ಪೂಜೆ, ಮಕ್ಕಳ ಪೂಜೆ ನಡೆಯುತ್ತದೆ. 30 ರಂದು ದುರ್ಗಾಷ್ಟಮಿ, ಅಕ್ಟೋಬರ್ 2 ರಂದು ವಿಜಯ ದಶಮಿ ಪೂಜೆ ನಡೆದು, ತಾ 3 ರಂದು ಬೆಳಿಗ್ಗೆಯಿಂದ 4 ರ ಬೆಳಗ್ಗೆ ತನಕ ಅಹೋರಾತ್ರಿ ಏಕಾಹ ಭಜನೆ ನಡೆಯುತ್ತದೆ. ತಾ 5 ರಂದು ತಾಂಬೂಲ ಪ್ರಶ್ನೆ ನಡೆಯಲಿದೆ. ಎಲ್ಲರಿಗೂ ಆದರದ ಸ್ವಾಗತವನ್ನು ಆಡಳಿತ ಮೊಕ್ತೇಸರ ರಾಜೇಶ್ ಭಟ್ ಹಾಗೂ ಆಡಳಿತ ವರ್ಗ ಬಯಸಿದೆ.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here