ಶರೀಫ್ ಅವರಿಗೆ ಕರ್ನಾಟಕ ರತ್ನ ಶ್ರೀ ಪ್ರಶಸ್ತಿಗೆ ಆಯ್ಕೆ

0
52


ಬಂಟ್ವಾಳ. ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ತರಕಾರಿಯನ್ನು ಕೊಡುವ ಮೆಲ್ಕರಿನ ತರಕಾರಿ ವ್ಯಾಪಾರಿ ಮಹಮ್ಮದ್ ಶರೀಫ್ ಅವರಿಗೆ ರಾಜ್ಯಮಟ್ಟದ ಕರ್ನಾಟಕ ರತ್ನ ಶ್ರೀ ಪ್ರಶಸ್ತಿ ಆಯ್ಕೆಯಾಗಿದ್ದಾರೆ
ವಸಂತ ಲಕ್ಷ್ಮಿ ಫೌಂಡೇಶನ್ ಸಂಜಯನಗರ ಬೆಂಗಳೂರು ಇವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸದಾಶಿವನಗರದ ವೀರಶೈವ ಸಭಾಭವನದಲ್ಲಿ ಇದೇ ರವಿವಾರ ಬೆಳಗ್ಗೆ 11 ಗಂಟೆಗೆ 20 ಜನ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹಮ್ಮದ್ ಶರೀಫ್ ಇವರು ಒಬ್ಬ ಸಾಧಕರಾಗಿದ್ದಾರೆ ಈಗಾಗಲೇ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ.
ನಾಡಿನ ಹೆಸರಾಂತ ಸಾಹಿತಿ ನಾಡೋಜ ಡಾ. ಕುಂಬಾರ್ ವೀರಭದ್ರಪ್ಪನವರು . ಮಾಜಿ ಸಚಿವ ವರ್ತೂರ್ ಪ್ರಕಾಶ್. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಚಿತ್ರನಟ ವಿ ಮನೋಹರ್ ಮತ್ತು ಚಿತ್ರನಟಿ ರೇಖಾದಾಸ್. ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆಂದು ವಸಂತ ಲಕ್ಷ್ಮಿ ಫೌಂಡೇಶನ್ ಕಾರ್ಯದರ್ಶಿ ಕೆ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here