ಶಾರಿಕ್ ಟಾರ್ಗೆಟ್ ಧರ್ಮಸ್ಥಳ ಆಗಿತ್ತು, ಮಂಗಳೂರಿನ ಕುಕ್ಕರ್ ಬಾಂಬ್ ಕೇಸ್‌ನಲ್ಲಿ ED ಬಿಗ್ ಅಪ್ಡೇಟ್‌!

0
47

ಮಂಗಳೂರು: ಜಾರಿ ನಿರ್ದೇಶನಾಲಯ (ಇಡಿ), ಬೆಂಗಳೂರು ವಲಯ ಕಛೇರಿಯು 2022r ಮಂಗಳೂರು ಆಟೋರಿಕ್ಷಾ ಬಾಂಬ್‌‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸೈಯದ್ ಯಾಸಿನ್‌ನ ಬ್ಯಾಂಕ್ ಖಾತೆಯಲ್ಲಿದ್ದ 29,176 ರೂಪಾಯಿಗಳನ್ನು ದಿನಾಂಕ 05/08/2025 ರಂದು ಭಾರತ ಸರ್ಕಾರದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ , 2002 ರ ಅಡಿಯಲ್ಲಿ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಈ ಬೆನ್ನಲ್ಲೇ ಇಡಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಫೋಟಕ ಅಂಶವೊಂದು ಹೊರಬಂದಿದ್ದು, ಮಂಗಳೂರಿನ ಆಟೋ ರಿಕ್ಷಾದಲ್ಲಿ ಬಾಂಬ್‌ ಸ್ಫೋಟಿಸಿದ ಶಾರಿಕ್‌ ಧರ್ಮಸ್ಥಳ ದೇಗುಲವನ್ನು ಟಾರ್ಗೆಟ್ ಮಾಡಲಾಗಿದ್ದ್ ಎಂದು ಇಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಏನಿದು ಪ್ರಕರಣ?

2022ರ ನವೆಂಬರ್ 19ರಂದು ಸಂಜೆ 4:40ಕ್ಕೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋರಿಕ್ಷಾ ಚಾಲಕ ಕೆ. ಪುರುಷೋತ್ತಮ ಎಂಬವರ ಆಟೋರಿಕ್ಷಾದ ಹಿಂಭಾಗದಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ನಂತರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡು RC 47/2022/NIA/DLI ಎಂಬ ಎಫ್‌ಐಆರ್ ದಾಖಲಿಸಿತು. ನಂತರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡು RC 47/2022/NIA/DLI ಎಂಬ ಎಫ್‌ಐಆರ್ ದಾಖಲಿಸಿತು. ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 3, 4 ಮತ್ತು 5ರ ಅಡಿಯಲ್ಲಿ ಈ ಆರೋಪಗಳು PMLA ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲ್ಪಟ್ಟಿದ್ದರಿಂದ, ಇಡಿಯು 25/11/2022 ರಂದು ECIR BGZO/84/2022 ದಾಖಲಿಸಿ ತನಿಖೆ ಆರಂಭಿಸಿತು.

LEAVE A REPLY

Please enter your comment!
Please enter your name here