ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ( ರಿ) ಬಂಟ್ವಾಳ ಇದರ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ತಂಡ ಕಾಡಬೆಟ್ಟು ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನ ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲೆ ಕಾವಳಪಡೂರು ಇಲ್ಲಿ ನಡೆಸಲಾಯಿತು. ಶಾಲೆಯ ಸುತ್ತಮುತ್ತ ಇದ್ದ ಹುಲ್ಲು ಕಡ್ಡಿಗಳನ್ನು ತೆಗೆದು, ಶಾಲೆಯ ಬದಿಯಲ್ಲಿ ಚರಂಡಿಯಲ್ಲಿ ತುಂಬಿದ ಕಸ ಕಡ್ಡಿಗಳನ್ನು ತೆರವು ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗಣ್ಯರಾದ ಶ್ರತಾಂಜನ್ ಜೈನ್ ಆಲಂಪುರಿ ಗುತ್ತು ಹಾಗೂ ವಿನ್ಸೆಂಟ್ ಮಧ್ವ, ಶಾಲೆಯ ಮುಖ್ಯೋಪಾಧ್ಯಾಯನಿ ವರಾದ ಸೇವರಿನ್, ಚರ್ಚ್ ಧರ್ಮ ಗುರುಗಳಾದ ವಂದನೀಯ ಅನಿಲ್ ರೋಷನ್ ಲೋಬೊ ಒಕ್ಕೂಟ ಸೇವಾ ಪ್ರತಿನಿಧಿಗಳಾದ ಸುಮಿತ್ರ ರಜನಿ ಉಪಸ್ಥಿತರಿದ್ದು ಸ್ವಚ್ಛತಾ ಕಾರ್ಯಕ್ಕೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕಾಡಬೆಟ್ಟು ವಗ್ಗ ಶೌರ್ಯ ತಂಡಕ್ಕೆ ವಿನ್ಸೆಂಟ್ ಮಧ್ವ ಹಾಗೂ ಶ್ರತಾಂಜನ್ ಜೈನ್ ಹುಲ್ಲು ಕಟ್ಟಿಂಗ್ ಹೊಸ ಮಷೀನ್ ಕೊಡುಗೆಯಾಗಿ ನೀಡಿದ್ದು ಅದನ್ನು ತಂಡಕ್ಕೆ ಹಸ್ತಾಂತರ ಮಾಡಿದರು.
ಸ್ವಚ್ಛತಾ ಕಾರ್ಯದಲ್ಲಿ ತಂಡದ ಸಂಯೋಜಕೀ ರೇಖಾ ಪಿ ಘಟಕ ಪ್ರತಿನಿಧಿ ಪ್ರವೀಣ್ , ಸದಸ್ಯರಾದ ಸಂಪತ್ ಶೆಟ್ಟಿ, ರೋಹಿತ್, ಅಶೋಕ ಬೊಲ್ಮಾರು ಮಹಾಬಲ ರೈ , ಅಶೋಕ ಹಾರೋದ್ದು , ಜನಾರ್ದನ, ರಮೇಶ್, ವಿನೋದ್, ದಿನೇಶ್ , ಮೋಹನಂದ, ಪವಿತ್ರ ,ಪ್ರಮೀಳಾ, ಶಶಿಕಲಾ, ಆನಂದ, ನಾರಾಯಣ ಪೂಜಾರಿ ಭಾಗವಹಿಸಿದ್ದರು. ಶ್ರಮದಾನದ ನಂತರ ಸಂಘದ ಮಾಸಿಕ ಸಭೆಯನ್ನು ಮಾಡಲಾಯಿತು