ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನ ಹಾಗೂ ಮಾಸಿಕ ಸಭೆ

0
32


ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನ ಹಾಗೂ ಮಾಸಿಕ ಸಭೆ ಜನವರಿ 18 ರವಿವಾರ ಜರಗಿತು.

ಶೌರ್ಯ ತಂಡದ ಸದಸ್ಯರು ಶಿವರಾತ್ರಿಯ ಜಾತ್ರೋತ್ಸವದ ಪ್ರಯುಕ್ತ ಕಾರಿಂಜೇಶ್ವರ ದೇವಸ್ಥಾನದ ಬೀದಿಯಲ್ಲಿ ತುಂಬಿಕೊಂಡಿದ್ದ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಕಾರಿಂಜಿೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ವೀರೇಂದ್ರ ಅಮೀನ್, ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಮೇಲ್ವಿಚಾರಕ ಸುರೇಶ್, ಸೇವಾ ಪ್ರತಿನಿಧಿ ಸುಮಿತ್ರ ರಜನಿ ಉಪಸ್ಥಿತರಿದ್ದರು.

ಸ್ವಚ್ಛತಾ ಶ್ರಮದಾನದಲ್ಲಿ ಶೌರ್ಯ ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕೀ ರೇಖಾ ಪಿ ಸದಸ್ಯರುಗಳಾದ ಸಂಪತ್ ಶೆಟ್ಟಿ ಮೋಹನಂದ,ನಾರಾಯಣ್ ಶೆಟ್ಟಿ, ಅಶೋಕ ಹಾರೊದ್ದು, ಮಹಾಬಲ ರೈ ಪವಿತ್ರ, ಶಶಿಕಲಾ, ಪವನ್, ರೋಹಿತ್, ಲಕ್ಷ್ಮಣ್ , ವಿನೋದ್, ಅಶೋಕ ಬೊಲ್ಮರ್, ರಮೇಶ್ ಭಾಗವಹಿಸಿದ್ದರು.
ಸ್ವಚ್ಛತಾ ಕಾರ್ಯಕ್ರಮದ ಬಳಿಕ ತಂಡದ ಮಾಸಿಕ ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶೌರ್ಯ ತಂಡದ ಎಲ್ಲಾ ಸದಸ್ಯರಿಗೆ ನೀಡಿದ ಬ್ಯಾಗನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here