ಜವಾಹರ್ ಬಾಲ್ ಮಂಚ್ ಇದರ ಮಕ್ಕಳ ಒಕ್ಕೂಟದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಶೌರ್ಯ ಎಸ್ ಆರ್ ಆಯ್ಕೆಯಾದರು.
ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳೋತ್ಸವದಲ್ಲಿ,ರಾಜ್ಯಅಧ್ಯಕ್ಷರು ಮೈನುದ್ದಿನ್ ರವರ ಶಿಫರಾಸ್ಸಿನಂತೆ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಜಿ ವಿ ಹರಿ ಇವರ ಆಯ್ಕೆಯನ್ನು ಘೋಷಿಸಿದರು.
ಶೌರ್ಯ ಬಂಟ್ವಾಳ ತಾಲೂಕಿನ ಡಾಕ್ಟರ್ ರಾಜೇಶ್ ಹಾಗೂ ನ್ಯಾಯವಾದಿ ಶೈಲಜಾ ದಂಪತಿಗಳ ಪುತ್ರನಾಗಿದ್ದು,ಉತ್ತಮ ವಾಗ್ಮಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡಕೊಂಡವರಾಗಿರುತ್ತಾರೆ ದ್ವಿತೀಯ ಪಿಯುಸಿ ವಿದ್ಯಭ್ಯಾಸವನ್ನು ಮುಗಿಸಿ ಮುಂದಿನ ವಿದ್ಯಾಭ್ಯಾಸ ಮೆಡಿಕಲ್ ಮಾಡುವ ಹಂಬಲ ದಲ್ಲಿರುತ್ತಾರೆ