ಪ್ರಸಿದ್ಧ ಕನ್ನಡ ಹಾಡು “ಪಂಕಜಾ” ದಲ್ಲಿ ನಟಿಸಿದ್ದ ನಟಿ ಶೆಫಾಲಿ ಜರಿವಾಲಾ ಅವರ ನಿಧನದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಹೃದಯಾಘಾತ ಎಂದು ಹೇಳಲಾಗಿದ್ದರೂ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೆಫಾಲಿ ಅವರು 42 ವರ್ಷ ವಯಸ್ಸಿನವರಾಗಿದ್ದು, ಆರೋಗ್ಯವಾಗಿಯೇ ಇದ್ದರು ಎನ್ನಲಾಗಿದೆ.
ಕನ್ನಡದಲ್ಲಿ ‘ಪಂಕಜಾ..’ ಹಾಡಿನಲ್ಲಿ ಭರ್ಜರಿಯಾಗಿ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದಿದ್ದ ನಟಿ ಶೆಫಾಲಿ ಜರಿವಾಲಾ ಸಾವಿನ ವಿಚಾರವಾಗಿ ಶಾಕಿಂಗ್ ಅಪ್ಡೇಟ್ ಒಂದು ಸಿಕ್ಕಿದೆ. ಆರಂಭದಲ್ಲಿ ಇದು ಹೃದಯಾಘಾತದಿಂದ ಆದ ಸಾವು ಎಂದು ಹೇಳಲಾಗಿತ್ತು. ಈಗ ಪೊಲೀಸರು ನಟಿಯ ನಿಧನದ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಹಾರ್ಟ್ ಅಟ್ಯಾಕ್ನಿಂದಲೇ ಅವರು ನಿಧನ ಹೊಂದಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ಅನುಮಾನ ಹೆಚ್ಚಾಗಿದೆ.