ಮಧ್ಯಪ್ರದೇಶ: ಮತಾಂತರ ಹಾಗೂ ಮದುವೆ ನಿರಾಕರಿಸಿದ್ದಕ್ಕೆ ಶೇಖ್ ರಯೀಸ್ ಎಂಬಾತ ಭಾಗ್ಯಶ್ರೀ ಎಂಬುವವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗುವಂತೆ ರಯೀಸ್ ಒತ್ತಡ ಹಾಕುತ್ತಿದ್ದ, ಆಕೆ ನಿರಾಕರಿಸಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಭಾಗ್ಯಶ್ರೀ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕತ್ತು ಸೀಳಿದ್ದಷ್ಟೇ ಅಲ್ಲದೆ, ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಭಾಗ್ಯಶ್ರೀ ಸಹೋದರಿ ಸುಭದ್ರಾ ಬಾಯಿ ರಯೀಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆತ ತುಂಬಾ ದಿನಗಳಿಂದ ತನ್ನ ಅಕ್ಕನ ಬಳಿ ಮದುವೆಯಾಗುವಂತೆ ಹಾಗೂ ಮತಾಂತರಗೊಳ್ಳುವಂತೆ ಆತ ಒತ್ತಡ ಹಾಕುತ್ತಿದ್ದ. ಆದರೆ ಆಕೆ ಒಪ್ಪಿಕೊಂಡಿರಲಿಲ್ಲ, ಹೀಗಾಗಿ ರಾತ್ರೋ ರಾತ್ರಿ ಆಕೆಯ ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಆರೋಪಿಯ ವಿರುದ್ಧ ಕೊಲೆ ಮತ್ತು ದೌರ್ಜನ್ಯದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಆತನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಬುರ್ಹಾನ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ಅಂತರ ಸಿಂಗ್ ಕನೇಶ್ ದೃಢಪಡಿಸಿದ್ದಾರೆ. ಈ ಘಟನೆ ಹಿಂದೂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಪ್ರತಿಭಟನಾಕಾರರು ಇದನ್ನು ಲವ್ ಜಿಹಾದ್ ಎಂದು ಕರೆದಿದ್ದಾರೆ.