ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೆಲ್ ಎನ್ ಎಕ್ಸ್ ಪ್ಲೋರರ್ಸ್ ಜೂನಿಯರ್ ಫೌಂಡೇಶನ್ ತರಬೇತಿ ಕಾರ್ಯಗಾರ ಲರ್ನಿಂಗ್ ಲಿಂಕ್ ಫೌಂಡೇಶನ್ ನೀತಿ ಆಯೋಗದ ಸಹಯೋಗದೊಂದಿಗೆ ನವಂಬರ್ 25 ರಂದು ನಡೆಯಿತು. ಅಧ್ಯಕ್ಷತೆ ವಹಿಸಿದ್ದ ರೊಟೇರಿಯನ್ ಪ್ರವೀಣ್ ಚಂದ್ರ ಜೈನ್ ಕಾರ್ಯಗಾರ ಉದ್ಘಾಟಿಸಿ ಎಳೆಯ ಮಕ್ಕಳಲ್ಲಿ ಸಮಸ್ಯೆಗಳ ವಿಶ್ಲೇಷಣೆ ಹಾಗೂ ಸೃಜನಾತ್ಮಕ ಕೌಶಲ್ಯಗಳನ್ನು ಬೆಳೆಸಲು ಕಾರ್ಯಗಾರ ನೆರವಾಗಲಿದೆ ಎಂದು ಹೇಳಿದರು. ಲರ್ನಿಂಗ್ ಲಿಂಕ್ ಫೌಂಡೇಶನ್ ನ ಮ್ಯಾನೇಜರ್ ಮಹಮ್ಮದ್ ಸಕೀರ್ ರವರು ಎಲ್ಎಲ್ಎಫ್ ವತಿಯಿಂದ ಆಯೋಜಿಸಲ್ಪಡುವ ನಾನಾ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರೋಟರಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯನಿ ತಿಲಕಾ ಅನಂತವೀರ ಜೈನ್ ರವರು ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಸ್ಟೆಮ್ ಯೋಚನಾ ಶೈಲಿಯನ್ನು ಬೆಳೆಸಿಕೊಂಡು ಮುಂದಿನ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿರಬೇಕೆಂದರು . ಶಿಕ್ಷಕಿ ಸರಿತಾ ಜೆ ವಂದನಾರ್ಪಣೆ ಮಾಡಿದರು. ಎಲ್ಎಲ್ಎಫ್ ಮ್ಯಾನೇಜರ್ ಆದ ಮೊಹಮ್ಮದ್ ಸಕೀರ್ ರವರ ಮೇಲ್ವಿಚಾರಣೆಯಲ್ಲಿ , ಎಟಿಎಲ್ ಮೇಲ್ವಿಚಾರಣಾ ಶಿಕ್ಷಕಿ ಭಾರತಿ ಜಿ ಮತ್ತು ಸಹ ಶಿಕ್ಷಕಿ ರೇಖಾ ವೆಂಕಟೇಶ್ ಕಾರ್ಯಗಾರವನ್ನು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟರು.
Home ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೆಲ್ ಎನ್ ಎಕ್ಸ್ ಪ್ಲೋರರ್ಸ್ ಜೂನಿಯರ್ ಫೌಂಡೇಶನ್ ತರಬೇತಿ ಕಾರ್ಯಗಾರ

