ಮುಲ್ಕಿ:ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮಾ. 2 ರಿಂದ 7 ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕ್ಷೇತ್ರದ ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಿತು
ವೇದಮೂರ್ತಿ ಶ್ರೀಕಾಂತ್ ಭಟ್ ಕೊಲಕಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕ್ಷೇತ್ರದ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ದೇವರ ಆಶೀರ್ವಾದ ಹಾಗೂ ಭಕ್ತದ ಸಹಕಾರ ಮುಖ್ಯವಾಗಿದ್ದು ಯಶಸ್ವಿಯಾಗಿ ನಡೆಯಲಿ ಎಂದರು
ಈ ಸಂದರ್ಭ ಕ್ಷೇತ್ರದ ಅರ್ಚಕರಾದ ಪುರುಷೋತ್ತಮ ಭಟ್, ವಿಷ್ಣುಮೂರ್ತಿ ಭಟ್ ಪರೆಂಕಿಲ, ಉದ್ಯಮಿ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಮೋಹನ್ ಕೋಟ್ಯಾನ್ ಶಿಮಂತೂರು, ಕಸ್ತೂರಿ ಪಂಜ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಲೀಲಾ ಬಂಜನ್, ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ರಾಘು ಶೆಟ್ಟಿ ಲಾಯಿದೆ ಮನೆ, ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪಾ ವಿಷ್ಣುಮೂರ್ತಿ ಭಟ್, ನಂದನಾ ಶೆಟ್ಟಿ ಕುಬೆವೂರು, ಶಶಿಕಲಾ ಎನ್ ಕುಂದರ್, ಶಾಂತರಾಮ ಶೆಟ್ಟಿ ತೆಂಗಾಳಿ, ಅರುಣ್ ಕುಮಾರ್ ಕಟ್ಟಪುಣಿ, ಮಾಜೀ ಸದಸ್ಯರಾದ ದಿನೇಶ್ಚಂದ್ರ ಅಜಿಲ,ಹರೀಶ್ ಶೆಟ್ಟಿ, ಶಿಮಂತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಪ್ರಫುಲ್ಲಾ ಶೆಟ್ಟಿ, ಕಾರ್ಯದರ್ಶಿ ಮಮತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

