ಶಿಮಂತೂರು: ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ವಿಜೃಂಭಣೆಯ ನವ ಕಲಾಭಿಷೇಕ, ಗಣ ಹೋಮ

0
131

ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ದಿನಾಚರಣೆಯ ಪ್ರಯುಕ್ತ ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು
ಪ್ರಾತಕಾಲ ವಿಶೇಷ ಪ್ರಾರ್ಥನೆ, ತುಲಾಭಾರ ಸೇವೆ, ಶ್ರೀ ದೇವರಿಗೆ ನವಕ ಕಲಶಾಭಿಷೇಕ, 108 ತೆಂಗಿನ ಕಾಯಿಯ ಗಣ ಹೋಮ, ಮಧ್ಯಾಹ್ನ ಮಹಾಪೂಜೆ, ಭಾರತೀಯ ಸೇನೆಯಿಂದ ಪಾಕಿಸ್ತಾನದ ಭಯೋತ್ಪಾದಕರ ಶಿಬಿರಗಳ ಮೇಲೆ ಕಾರ್ಯಾಚರಣೆ ಯಶಸ್ಸಿ ಗೆ “ಸತ್ಯಕ್ಕೆ ಜಯವಾಗಲಿ ಶಾಂತಿ ಮರು ಸ್ಥಾಪನೆಯಾಗಲಿ” ವಿಶೇಷ ಪ್ರಾರ್ಥನೆ , ಪ್ರಸಾದ ವಿತರಣೆ,ಮಹಾ ಅನ್ನಸಂಪರ್ಪಣೆ ನಡೆಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ, ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯೆ ಪದ್ಮಿನಿ ವಿಜಯಕುಮಾರ್ ಶೆಟ್ಟಿ,ಜಯ ಶೆಟ್ಟಿ,ಜಯಕರ ಶೆಟ್ಟಿ ಮುಂಬೈ,ಶಂಕರ್ ಮಾಸ್ಟರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪಾ ಭಟ್, ಶಾಂತರಾಮ ಶೆಟ್ಟಿ ತೆಂಗಾಳಿ, ಶಶಿಕಲಾ, ನಂದನಾ ಶೆಟ್ಟಿ ಕುಬೆವೂರು,ಅರುಣ್ ಕುಮಾರ್, ಕಟ್ಟಪುಣಿ ಮಾಜೀ ಸದಸ್ಯ ಚಂದ್ರಹಾಸ್ ಸುವರ್ಣ, ಜಯದೇವಾಡಿಗ, ಪ್ರಬಂಧಕಿ ರಕ್ಷಿತಾ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here