ಶಿರ್ಲಾಲು: ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟ; ಮಹಾಸಭೆ

0
211

ಶುಭೋದಯ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ (ರಿ) ಶಿರ್ಲಾಲು ಇದರ ಮಹಾಸಭೆಯನ್ನು 17/09/2025 ಬುಧವಾರದಂದು ಪಂಚಾಯಿತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ನಳಿನಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸೌಭಾಗ್ಯ ಶ್ರೀ ಶಕ್ತಿ ಸಂಘದ ಸದಸ್ಯರಾದ ವಿಜಯ ರವರು ಪ್ರಾರ್ಥನೆ ಮಾಡಿದರು. LCRP ಅಶ್ವಿನಿ ರವರು ಎಲ್ಲರನ್ನ ಸ್ವಾಗತಿಸಿದರು. ಪಂಚಾಯಿತಿನ ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. MBK ಯಾದ ರೋಹಿಣಿ ರವರು 2024- 2025 ರ ವಾರ್ಷಿಕ ವರದಿ ಖರ್ಚು ವೆಚ್ಚ ಹಾಗೂ ಆಸ್ತಿ ಜವಾಬ್ದಾರಿಯನ್ನು ಮಂಡಿಸಿದರು. ಸಂಜೀವಿನಿ ಚಪ್ಪಾಳೆ ಮೂಲಕ ವರದಿಯನ್ನು ಅನುಮೋದಿಸಲಾಯಿತು.

ತಾಲೂಕಿನ ಸಂಪನ್ಮೂಲ ವ್ಯಕ್ತಿ (BRP-PRI) ಶ್ರೀಕಲಾ ರವರು VPRP ಯ ಬಗ್ಗೆ ಸವಿವರಾದ ಮಾಹಿತಿಯನ್ನು ನೀಡಿದರು. ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಅವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸಂಜೀವಿನಿ ಯೋಜನೆಯ ದ್ಯೇಯೋದ್ದೇಶದ ಬಗ್ಗೆ, ಜೀವನೋಪಾಯ ಚಟುವಟಿಕೆ ಬಗ್ಗೆ ಇತರ ಹಲವಾರು ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞಾವಿಧಿಯನ್ನು ವಾದಿಸಿದರು.. ಸಭೆಯಲ್ಲಿ ಸಂಜೀವಿನಿ ಗೀತೆಯನ್ನು ಹಾಡಿಸಿದರು.. ಪಶು ಸಖಿ ನಿರ್ಮಲ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಕೃಷಿ ಸಖಿ ಅಶ್ವಿನಿ ಕೆ ಇವರ ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here