ಶಿರ್ತಾಡಿ: ಮೊದಲನೇ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ

0
93

ಶಿರ್ತಾಡಿ: ಭುವನ ಜ್ಯೋತಿ ಕಾನೂನು ಕಾಲೇಜಿನಲ್ಲಿ ಅನಾವರಣ್ ಎಲ್‌ಎಲ್‌ಬಿ ಮೊದಲನೇ ವರ್ಷದ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮವನ್ನು ಹಾಗೂ ವಿದ್ಯಾರ್ಥಿ ಸಂಘವನ್ನು ಕಾಲೇಜಿನ ಸಭಾಂಗಣದಲ್ಲಿ ಭುವನ ಜ್ಯೋತಿ ಕಾನೂನು ಕಾಲೇಜಿನ ಸಂಚಾಲಕರಾದ ಪ್ರಶಾಂತ್ ಎನ್ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ತೆರಿಗೆ ಅಧೀಕ್ಷಕರು ಡಾ ರಾಜೇಶ್ ಟಿ.ವಿ ನೆರೆವೇರಿಸಿ ಮಾತನಾಡಿ ಕಾನೂನು ವಿದ್ಯಾರ್ಥಿಗಳಿಗೆ ರಾಷ್ಟಿçÃಯ ಭದ್ರತಾ ಸಂಸ್ಥಗಳಲ್ಲಿ ವೃತ್ತಿ ಅವಕಾಶಗಳ ಬಗ್ಗೆ ಅರಿವು ಮೂಡಿಸಿದರು ಹಾಗೂ ಗೌರವಾನ್ವಿತ ಅತಿಥಿಗಳಾಗಿ ಹಿರಿಯ ವಕೀಲರು ವಸಂತ ಅಡ್ಯಂತಾಯ ಮಾತನಾಡಿ ಕಾನೂನು ಕ್ಷೇತ್ರದಲ್ಲಿರುವ ಉದ್ಯೋಗ ಅವಕಾಶಗಳು ಹಾಗೂ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಹಿತಿ ನೀಡಿದರು.
ಭುವನ ಜ್ಯೋತಿ ಇನ್‌ಸ್ಟಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನ ಗವರ್ನಿಂಗ್ ಕೌನ್ಸಿಲ್ ಸದಸ್ಯ ರಾಘವೇಂದ್ರ ಪ್ರಭು, ಕಾರ್ಯದರ್ಶಿ ಪ್ರಶಾಂತ್ ಡಿಸೋಜ, ಖಜಾಂಚಿ ಲತಾ ಎ, ಪ್ರಾಂಶುಪಾಲ ಡಾ ಪ್ರದೀಪ್ ಎಂ ಡಿ ಹಾಗೂ ಹಿರಿಯ ಪ್ರಾಧ್ಯಾಪಕ ಡಾ. ಶೆರ್ಲಿ ಟಿ ಬಾಬು ಉಪಸ್ಥಿತರಿದ್ದರು.
ಕಾಲೇಜಿನ ೨೦೨೫-೨೬ ನೇ ಸಾಲಿನ ವಿದ್ಯಾರ್ಥಿ ಸಂಘದ ನಾಯಾಕಿಯಾಗಿ ಜನಿತ ದಿವ್ಯ ನಜರತ್ ಆಯ್ಕೆಯಾದರು. ಉಪನಾಯಕನಾಗಿ ರೋಹನ್ ಲೋಬೋ, ಕಾರ್ಯದರ್ಶಿಯಾಗಿ ನಿಶಾನ್ ಪ್ರಶಾಂತ್, ಖಜಾಂಜಿಯಾಗಿ ಸುಜಿತ್, ಉಪ ಖಜಾಂಜಿಯಾಗಿ ಅನನ್ಯ ಮತ್ತು ಐಶ್ವರ್ಯ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ೮೫ ವಿದ್ಯಾರ್ಥಿಘಲು ಭಾಗವಹಿಸಿದರು. ಕಾಲೇಜಿನ ಪ್ರಾಧ್ಯಪಕರಾದ ಸಂಘಮಿತ್ರ ರಾಯ್ ಪೈ, ಪ್ರಿಯಾ, ಶಿಲ್ಪಾ, ಧನರಾಜ್ ,ಕಿರಣ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಎಂ.ಡಿ ಸ್ವಾಗತಿಸಿದರು. ವಿದ್ಯಾರ್ಥಿ ಯಕ್ಷಿತಾ ವಂದಿಸಿದರು, ನೀರಜ್ ಹೆಗಡೆ ನಿರೂಪಿಸಿದರು.

LEAVE A REPLY

Please enter your comment!
Please enter your name here