ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವ ಕಾನೊಟ್ಟು ಕಂಬಳ ಕೂಟ ಕೋಣಗಳ ಯಜಮಾನ ಹಿರಿಯರಾದ ಶ್ರೀ ಬಡ್ಡು ಪೂಜಾರಿಯವರ ಹಿರಿಯ ಮಗನಾದ ಅರುಣ್ ಕುಮಾರ್ ಅವರು ಸುಮಾರು ವರ್ಷಗಳ ಹಿಂದೆ ನೆರೆ ಮನೆಯವರು ಒತ್ತಾಯ ಪೂರ್ವಕವಾಗಿ ತೆಂಗಿನ ಮರ ಹತ್ತಿಸಿ, ಕಾಯಿ ಕೊಯ್ದು ಇಳಿಯುವಷ್ಟರಲ್ಲಿ ಕೈ ಜಾರಿ ಕೆಳಗೆ ಬಿದ್ದು ಎಡ ಕೈ ಮುರಿದು, ಅಂದಿನ ಕಾಲದ ವೈದ್ಯಕೀಯ ವ್ಯವಸ್ಥೆ ಸರಿ ಇಲ್ಲದೆ ಅಂಗವಿಕಲನಾಗಬೇಕಾಯಿತು. ಬಾಲ್ಯದಲ್ಲಿಯೇ ಯಕ್ಷಗಾನ ಕಲಾ ಆಸಕ್ತರಾದ ಇವರು ಅವಘಡ ನಂತರ ನಾಟ್ಯ ತರಬೇತಿ ಮೊಟಕುಗೊಳಿಸಬೇಕಾಯಿತು. ನಂತರದಲ್ಲಿ ಧರ್ಮಸ್ಥಳ ಮಹೇಶ್ ಕನ್ಯಾಡಿ ಇವರಿಂದ ತರಬೇತಿ ಪಡೆದು ಆದರೂ ಹವ್ಯಾಸಿ ಭಾಗವತರಾಗಿದ್ದು ವೃತ್ತಿಯನಾಗಿಸದೆ, ಪರಿಶ್ರಮದ ಕೆಲಸ ಮಾಡಲಾಗದೆ ಸಣ್ಣ ಅಂಗಡಿ ನಡೆಸಿ ಕೊಂಡು ಬಂದಿರುವರು. ಪ್ರಸ್ತುತ ಕೈ ನೋವಿನಿಂದ ಕೂಡಿರುತ್ತಾರೆ. ಇವರ ಅವಳಿ ಮಕ್ಕಳಲ್ಲಿ ದೀಶಿತ್ ಕುಮಾರ್ ಕಳೆದ 7 ವರ್ಷಗಳಿಂದ ಅಪಸ್ಮರ ಕಾಯಿಲೆಯಿಂದ ಇದೀಗ ತೀರಾ ಬಳಲುತ್ತಿದ್ದು, ತನ್ನ ಎಲ್ಲಾ ದೈನಂದಿನ ಚಟುವಟಿಕೆಗಳಲ್ಲಿ ತಂದೆತಾಯಿಯನ್ನು ಅವಲಂಬಿಸಿದ್ದು, ಎಲ್ಲೊಂದರಲ್ಲಿ ಬೀಳುತ್ತಿದ್ದು ತುಂಬಾ ನಿಗಾವಹಿಸಬೇಕಿದ್ದು, ಮೆದುಳಿಗೆ ಚಿಪ್ ಅಳವಡಿಕೆಗೆ ಮಂಗಳೂರು ಪಡೀಲ್ ಫಸ್ಟ್ ನ್ಯೂರೋ ಡಾಕ್ಟರ್. ಶ್ರುತಿ ಎನ್.ಎಂ. (ಎಮ್.ಡಿ., ಡಿ.ಎಮ್) ಅವರು 20 ಲಕ್ಷ ಖರ್ಚಿನ ಬಗ್ಗೆ ಯೋಜನೆ ನೀಡಿರುತ್ತಾರೆ.

ಐದು ಸದಸ್ಯರು ಇರುವ ಕುಟುಂಬವು ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯ ಇಂದ ಕೂಡಿರುತ್ತದೆ. ಇದುವರೆಗೆ ಔಷಧ ಉಪಚಾರಕ್ಕೆ ಹಲವಾರು ಲಕ್ಷ ರೂಪಾಯಿ ಆಗಿರುತ್ತದೆ, ಅಸಾಯಕರಾದ ಇವರಿಗೆ ಎಲ್ಲಾ ಸಮಾಜ ಭಾಂದವರು ಆದಷ್ಟು ಸಹಾಯಕ್ಕೆ ಕೈ ಜೋಡಿಸೋಣ.

