ಕಲಾಕುಂಚ ಅತ್ತಿಗೆರೆ ಶಾಖೆಯಿಂದ ಮಹಾಶಿವರಾತ್ರಿ ಪ್ರಯುಕ್ತ ಮಕ್ಕಳಿಂದ ಶಿವಲಿಂಗ ಸೃಷ್ಠಿ

0
12

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಗ್ರಾಮೀಣ ಪ್ರದೇಶದ ಅತ್ತಿಗೆರೆ ಶಾಖೆಯ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಕ್ಕಳು ಶಿವಭಕ್ತಿಯಿಂದ ಹುತ್ತದ ಮಣ್ಣಿನಲ್ಲಿ ಪರಮೇಶ್ವರ ಶಿವಲಿಂಗ ಸೃಷ್ಠಿ ಮಾಡಿ ಶಿವಧ್ಯಾನ ಮಾಡಿದರು ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಆಧ್ಯಾತ್ಮಿಕ ಪರಂಪರೆಯ ಆಸಕ್ತಿಯ ಮಕ್ಕಳಾದ ವೈಷ್ಣವಿ ಪಿ, ಜಾನವಿ ಸಿ.ಆರ್., ಧರಣಿ ಟಿ.ಎಂ. ಮೋಕ್ಷ ಟಿ.ಎಂ, ಇಂಪನ ವಿ., ಪರಿಣಿತ ವಿ., ನಿಧಿ ಎಂ.ಬಿ., ಐಶ್ವರ್ಯ ಆರ್, ಆದ್ಯ ಎ.ಎಸ್, ಚಂದು ಸಿ.ಆರ್., ಮಂಥನ್ ಎಸ್., ವರ್ಣಿಕ ಕೆ.ಎಲ್ ಸೇರಿದಂತೆ ಕಲಾಕುಂಚ ಗ್ರಾಮೀಣ ಪ್ರದೇಶದ ಅತ್ತಿಗೆರೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಪ್ರಶಾಂತ್ ದಂಪತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here