ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಗುರು ಪೂರ್ಣಿಮೆ ಆಚರಣೆ

0
44

ಉಡುಪಿ: ಇಲ್ಲಿಯ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನವಾದ ಗಾಯತ್ರಿ ಧ್ಯಾನಪೀಠದಲ್ಲಿ ಆಶಾದ ಆಷಾಢ ಹುಣ್ಣಿಮೆಯಂದು ಶ್ರೀ ಗುರು ಪೂರ್ಣಿಮೆ ಆಚರಣೆಯು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಭಕ್ತ ಸಮೂಹದ ಸಹಕಾರದೊಂದಿಗೆ ಸಂಪನ್ನಗೊಂಡಿತು.

ಗಾಯತ್ರಿ ಧ್ಯಾನಪೀಠದಲ್ಲಿ ಗುರು ಹುಣ್ಣಿಮೆಯ ಪ್ರಯುಕ್ತ ಶ್ರೀ ಮನ್ಯು ನಾಮಕ ಲಕ್ಷ್ಮೀನರಸಿಂಹ ಮಹಾ ಯಾಗವನ್ನು ವೇದಮೂರ್ತಿ ವಿಖ್ಯಾತ್ ಭಟ್ ನೇತೃತ್ವದಲ್ಲಿ ನೆರವೇರಿತು. ಯಾಗದ ಅಂಗವಾಗಿ ವಿವಿಧ ಆರಾಧನೆಗಳು ಸಂಪನ್ನಗೊಂಡವು
ಶ್ರೀ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಪ್ರಸನ್ನ ಪೂಜೆ ನೆರವೇರಿದ ಬಳಿಕ ಕ್ಷೇತ್ರ ಗುರುಗಳಾದ ಶ್ರೀ ರಮಾನಂದ ಗುರೂಜಿಯವರ ಪಾದಪೂಜೆ ಯನ್ನು ಶಿಷ್ಯವರ್ಗ ನೆರವೇರಿಸಿದರು.. ನಂತರ ಪ್ರಜ್ಞಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.. ಗಾನ ನಾಟ್ಯ ನಾದ ಪ್ರಿಯಳ ಸನ್ನಿಧಾನದಲ್ಲಿ ವಿದ್ವಾನ್ ಭವಾನಿ ಶಂಕರ್ ನೇತೃತ್ವದ ಬ್ರಾಹ್ಮರಿ ನೃತ್ಯಲಯ ಡಾಕ್ಟರ್ ಮಂಜರಿ ಚಂದ್ರ ಪುಷ್ಪರಾಜ್ ಅವರ ಸೃಷ್ಟಿ ಕಲಾಕುಟೀರದ ಕಲಾವಿದರು ನೃತ್ಯ ಸೇವೆಯನ್ನು ಸಮರ್ಪಿಸಿದರು.
ಶ್ರೀ ಗುರೂಜಿಯವರ ಸೂಕ್ತ ಮಾರ್ಗದರ್ಶನದಿಂದ ಕ್ಷೇಮ ಕಂಡುಕೊಂಡ ಭಕ್ತ ಜನರು ಗುರು ಅಭಿನಂದನೆಯನ್ನು ಸಲ್ಲಿಸಿ , ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಕೃತಾರ್ಥರಾದರು..
ಮಧ್ಯಾಹ್ನ ನೆರವೇರಿದ ಮೃಷ್ಟಾನ್ನ ಸಂತರ್ಪಣೆಯಲ್ಲಿ ವಿಧದ ವಿಧ ವಿಧದ ಭಕ್ಷ ಭೋಜಗಳನ್ನು ಭಕ್ತರುಗಳು ಸವಿದರು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದರು.

LEAVE A REPLY

Please enter your comment!
Please enter your name here