ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ಇದೇ ತಿಂಗಳ ತಾರೀಕು 31ರ ಭಾನುವಾರದಂದು ನಾಗ ತಾನು ತರ್ಪಣ ಮಂಡಲ ಸೇವೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ವಿಕ್ಯಾತ್ ಭಟ್ ನೇತೃತ್ವದಲ್ಲಿ ಅನ್ನಸಂತರ್ಪಣೆಯೊಂದಿಗೆ ನೆರವೇರಲಿರುವುದು.
ಆ ಪ್ರಯುಕ್ತ ಕ್ಷೇತ್ರದಲ್ಲಿ ಪ್ರಾತಃಕಾಲ ತನು ತರ್ಪಣ ಸೇವೆಗೆ ಪಂಚವರ್ನಾತ್ಮಕವಾಗಿ ರಚಿಸಲ್ಪಡುವ ಬೃಹತ್ ಮಂಡಲ ಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಲಿದ್ದಾರೆ.. ಕ್ಷೇತ್ರದ ನಾಗಾಲಯದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶಾ ಅಭಿಷೇಕ, ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಕಲಶ ಅಭಿಷೇಕ, ಪಂಚಮುಖಿ ಗಾಯತ್ರಿ ದೇವಿಯ ಸನ್ನಿಧಾನದಲ್ಲಿ ಗಾಯತ್ರಿ ಸಹಸ್ರನಾಮ ಹೋಮ ನೆರವೇರಲಿದೆ…
ತನು ತರ್ಪಣ ಸೇವೆಯು ಸಂಜೆ ಐದು ಗಂಟೆಗೆ ಆರಂಭಗೊಳ್ಳಲಿದೆ.
ಪೂಜೆಯ ಅಂಗವಾಗಿ ಬ್ರಹ್ಮಣಾ ಸುವಾಸಿನಿ ಕನ್ನಿಕೆ ಆರಾಧನೆಗಳು ನೆರವೇರಲಿವೆ. ನಾಗ ಸಂದರ್ಶನ ಕಲ್ಲಂಗಳ ರಾಮಚಂದ್ರ ಕುಂಜಿತಾಯ ಅವರಿಂದ ನೆರವೇರಲಿದೆ. ನಾಗದೋಷದಿಂದ ವಿಮುಕ್ತಾರಾದ ಭಕ್ತ ಕುಟುಂಬ ಈ ಮಹಾನ್ ಸೇವೆಯನ್ನು ನೀಡಿ ಕೃತಾರ್ಥರಾಗಲಿದ್ದಾರೆ. ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.