ಶ್ರೀ ಕ್ಷೇತ್ರ ಶಂಕರಪುರ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ನೂರೆಂಟು ದಿನ ನೂರೆಂಟು ಮಠ, ಮಂದಿರಗಳ ಭೇಟಿ ನೀಡಿ ರಾಷ್ಟ-ಧರ್ಮ ಹಾಗೂ ಯೋಧರು ಅವರ ಕುಟುಂಬದ ರಕ್ಷಣೆ ಹಿಂದೂಗಳ ಒಗ್ಗಟ್ಟು ಹಾಗೂ ಹಿಂದೂಗಳ ರಕ್ಷಣೆಯೊಂದಿಗೆ ಶ್ರೀ ಕೃಷ್ಣ ಜನ್ಮ ಭೂಮಿಯ ಮುಕ್ತಿಗಾಗಿ ಗುರೂಜಿಯವರ ಮಹಾ ಸಂಕಲ್ಪ “ಸತ್ಯ – ಧರ್ಮದ ನಾಡಿನಲ್ಲಿ ಜ್ಞಾನದ ನಡೆ 108 ನೇ ದಿನದ ನಡೆಯ ಅಷ್ಟೋತ್ತರ ಶತ ಪುಣ್ಯಕ್ಷೇತ್ರ ಯಾತ್ರೆಯ ಮಂಗಳೋತ್ಸವದ ಪ್ರಯುಕ್ತ ದಿನಾಂಕ 19.09.2025 ರಂದು ತಮಿಳುನಾಡಿನ ಶ್ರೀ ಶ್ರೀ ಗರುಡಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಶ್ರೀ ಚಂಡಿಕಾಯಾಗ ಪೂರ್ವಕ ಸಾಮೂಹಿಕ ಪ್ರಾರ್ಥನೆ ಬಳಿಕ ಮಹಾಪೂಜೆ ನೆರವೇರಲಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿ ಗೀತಾಂಜಲಿ ಸುವರ್ಣ ಅಧ್ಯಕ್ಷರು ಸುಧಾಕರ್ ಶೆಟ್ಟಿ ಶ್ರೀ ದಕ್ಷಿಣದ ಶಿರಡಿ ಸಾಯಿಬಾಬಾ ಮಂದಿರದ ಸಾಯಿ ಸೂರಜ್ ಹಾಗೂ ಗುರೂಜಿಯವರ ಶಿಷ್ಯರು ಭಕ್ತರು ಉಪಸ್ಥಿತರಿದ್ದರು.

