ಮೀರಾ -ಭಾಯಂದರ್, ಜೂ.20- ಸಂಘ-ಸಂಸ್ಥೆಗಳು, ಭಜನಾ ಮಂಡಳಿಗಳು, ಗಣೇಶೋತ್ಸವ ಮಂಡಳಿಗಳು, ಅಯ್ಯಪ್ಪ ಶಿಬಿರಗಳು, ನಾಟಕ ಸಂಸ್ಥೆ, ನೃತ್ಯ ಸಂಸ್ಥೆಗಳು ಸೃಷ್ಟಿಯಾದ ಮೀರಾ- ಭಾಯಂದರ್‌ನಲ್ಲಿ /ಜೂ 15.06.2025 ರಂದು ಹೊಸದೊಂದು ಶ್ರೀ ನಾರಾಯಣ ಗುರು ಭಜನಾ ಮಂಡಳಿ ಜನ್ಮತಾಳಿದೆ. ಸಂಘಟನೆಯ ಮಹತ್ವ ಮತ್ತು ಅವಶ್ಯಕತೆಯನ್ನು ಮನದಲ್ಲಿಟ್ಟುಕೊಂಡು ಮೀರಾ- ಭಾಯಂದರ್ ಪರಿಸರದ ಸಮಾಜ ಸೇವಕರು, ಬಿಲ್ಲವ ಬಂಧುಗಳು ಒಟ್ಟಾಗಿ ಮನೆ ಮನೆಯಲ್ಲಿ ಭಜನೆ, ಕುಣಿತ ಭಜನೆ ಪ್ರಾರಂಭ ಮಾಡಬೇಕೆನ್ನುವ ಉದ್ದೇಶದಿಂದ ಪ್ರಾರಂಭಗೊಂಡಿದೆ. ಶ್ರೀ ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸಿಕೊಂಡು ಸಮಾನ ಮನಸ್ಸಿನಿಂದ ಸಂಘಟಿತರಾಗಿ ಉದಯ ಭಕ್ತಿ ಭಾವ ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಈ ಭಜನಾ ಮಂಡಳಿಗೆ ಚಾಲನೆ ನೀಡಲಾಗಿದೆ.
ಮಂಡಳಿಯ ಮುಖಾಂತರ ಜನಸೇವೆ, ಸಮಾಜ ಸೇವೆ ಮಾಡುವ ಉದ್ದೇಶದಿಂದ ಹೊಸ ಸಮಿತಿಯನ್ನು ರಚಿಸಲಾಗಿದೆ. ಹಿರಿಯ ಸಂಘಟಕರು, ಸಮಾಜ ಸೇವಕರುಗಳಾದ ಶಿವಾನಂದ ಬಂಗೇರ, ತಿಮ್ಮಪ್ಪ ಪೂಜಾರಿ, ನರೇಶ್ ಕೆ. ಪೂಜಾರಿ, ನಾರಾಯಣ ಎಲ್ ಸುವರ್ಣ ಇವರುಗಳನ್ನು ಗೌರವ ಅಧ್ಯಕ್ಷರುಗಳನ್ನಾಗಿ, ಯುವ ನಾಯಕ, ಸಂಘಟನಾ ಮುಂದಾಳು ಉದಯ ಡಿ. ಸುವರ್ಣರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಮಾಧವ್ ಆರ್ ಸುವರ್ಣ, ಎಕೆಹರೀಶ್, ದಯಾನಂದ್ ಸುವರ್ಣರನ್ನು ಮತ್ತು ಶೇಖರ್ ಪೂಜಾರಿಯವರನ್ನು ಉಪಾಧ್ಯಕ್ಷರುಗಳಾಗಿ ನೇಮಿಸಲಾಗಿದೆ. ಸಂಘಟಕಿ, ಸಮಾಜ ಸೇವಕಿ ಮಾಲತಿ ಆರ್ ಬಂಗೇರ ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಗೌ ಪ್ರ ಕಾರ್ಯದರ್ಶಿಯಾದರೆ, ಶಾಂತಾ ಎ. ಪೂಜಾರಿ, ಬೇಬಿ ವಿ ಪೂಜಾರಿ ಇವರುಗಳನ್ನು ಜತೆ ಕಾರ್ಯದರ್ಶಿಗಳನಾಗಿ ಆಯ್ಕೆ ಮಾಡಲಾಯಿತು. ಶೋಭಾ ಕೋಟ್ಯಾನ್ ಮಂಡಳಿಯ ಪ್ರಧಾನ ಕೋಶಾಧಿಕಾರಿಯಾಗಿ, ಚಂದ್ರಾವತಿ ಎಲ್ ಪೂಜಾರಿ ಮತ್ತು ಕಲಾ ಪೂಜಾರಿಯವರು ಜತೆ ಕೋಶಾಧಿಕಾರಿಗಳಾಗಿ ಆಯ್ಕೆಯಾದರು. ಮಂಡಳಿಯ ಸಮಿತಿ ಸದಸ್ಯರುಗಳಾಗಿ ವಾಸುದೇವ್ ಪೂಜಾರಿ, ಸುಂದರ್‌ಪೂಜಾರಿ, ರವೀಂದ್ರ ಬಂಗೇರ, ಉಮೇಶ್ ಬಾರ್ಕೂರು, ವಿಶ್ವನಾಥ್ ಪೂಜಾರಿ, ಅಶೋಕ್ ಕರ್ಕೇರ, ಲೋಕನಾಥ್ ಪೂಜಾರಿ, ಗಂಗಾಧರ್ ಪೂಜಾರಿ, ಸೌಮ್ಯ ಪೂಜಾರಿ, ಶ್ವೇತ ಪೂಜಾರಿ, ವನಿತಾ ಅಮೀನ್, ಉಷಾ ಪೂಜಾರಿ, ಸವಿತಾ ಪೂಜಾರಿ, ಶೋಭಾ ಕೋಟ್ಯಾನ್, ಜಯ ಕೋಟ್ಯಾನ್, ಪುಷ್ಪಾ ಪೂಜಾರಿ, ಜಯಲಕ್ಷ್ಮೀ ಪೂಜಾರಿ, ಗುಣ ಪೂಜಾರಿ, ಶಿವರಾಮ್ ಪೂಜಾರಿ, ಲೀಲಾ ಪೂಜಾರಿ, ಸ್ನೇಹಲತಾ ಪೂಜಾರಿ, ಧನಲಕ್ಷ್ಮೀ ಪೂಜಾರಿ, ಸುಜಾತಾ ಎಸ್ ಪೂಜಾರಿ, ಕುಶಲ ಎಸ್ ಪೂಜಾರಿ, ತರುಣ್ ಮೂಲ್ಕಿ, ಶ್ರೀನಿವಾಸ್ ಸುವರ್ಣ, ಶೋಭಾ ಎ ಪೂಜಾರಿ, ರವೀಂದ್ರ ಪೂಜಾರಿ, ಪ್ರೇಮ ಎಸ್ ಪೂಜಾರಿ, ಕವಿತಾ ಎ ಪೂಜಾರಿ, ರಘುನಾಥ್ ಹಳೆಯಂಗಡಿ ಇವರುಗಳು ಸಮಿತಿಯ ಸದಸ್ಯರಾಗಿದ್ದಾರೆ. ಪೂಜಾ ಸಮಿತಿಯಲ್ಲಿ ‘ಅರ್ಚಕ ಸದಾನಂದ ಸುವರ್ಣ, ಲೀಲಾ ಗಣೇಶ್, ಗುಣವತಿ ಪೂಜಾರಿ, ವಿಜಯಲಕ್ಷ್ಮೀ ಬಿ.ಸುವರ್ಣ, ಪದ್ಮಾವತಿ ಪೂಜಾರಿ, ಧನಶ್ರೀ ಪೂಜಾರಿ, ಬಲರಾಜ್ ಎಸ್ ಕೋಟ್ಯಾನ್ ಹಾಗೂ ಗೀತಾರವರನ್ನು ನೇಮಿಸಲಾಗಿದೆ. ಮಂಡಳಿಯ ಮಹಿಳಾ ವಿಭಾಗದಲ್ಲಿ ಸುಮಿತ್ರಾ ಕರ್ಕೇರರನ್ನು ಅಧ್ಯಕ್ಷೆಯನ್ನಾಗಿ, ಸುವರ್ಣ ನಿರಂಜನಿ ಪೂಜಾರಿ ಮತ್ತು ಶಕುಂತಲಾ ಪೂಜಾರಿಯವರನ್ನು ಉಪ ಅಧ್ಯಕ್ಷೆ ಯರುಗಳನ್ನಾಗಿ ಮತ್ತು ಕಾರ್ಯದರ್ಶಿಯಾಗಿ ವಸಂತಿ ಪೂಜಾರಿ ಹಾಗೂ ವಿಶಾಲಾಕ್ಷಿ ಮೂಲ್ಕಿ ಯವರನ್ನು ಜತೆ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಯುವ ಸಂಘಟನೆ ಹಾಗೂ ಕುಣಿತ ಭಜನೆಗೆ ಒತ್ತು ನೀಡಿ ಯುವ ವಿಭಾಗದಲ್ಲಿ ಗಣೇಶ್ ಬಂಗೇರ, ತೇಜಸ್ ಪೂಜಾರಿ, ಸುರೇಶ್ ಪೂಜಾರಿ, ದಯಾನಂದ್ ಕೋಟ್ಯಾನ್, ಪ್ರದೀಪ್ ಪೂಜಾರಿ, ಶಿವರಾಮ್ ಪೂಜಾರಿ, ನವ್ಯ ಪೂಜಾರಿ, ಸುರೇಶ್ ಪೂಜಾರಿ, ಕೇಶವ್ ಪೂಜಾರಿ, ಸಾನ್ವಿ, ಸುವರ್ಣ, ಪ್ರಾಚಿ ಪೂಜಾರಿ, ಸಾತ್ವಿಕ್ ಸುವರ್ಣ, ಖುಷಿ ಪೂಜಾರಿ, ಪ್ರೀತೇಶ್ ಪೂಜಾರಿ, ವಿದ್ಯಾ ಪೂಜಾರಿ, ರಕ್ಷಿತಾ ಬಂಗೇರ, ಸೃಜನ್ ಪೂಜಾರಿ, ಸುರತಾನ್ ಪೂಜಾರಿ, ರಿಚಾಲ್ ಪೂಜಾರಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಮೀರಾ- ಭಾಯಂದರ್ ಪರಿಸರದ ನೂರಕ್ಕೂ ಮಿಕ್ಕಿ ಬಾಂಧವರರು ಪಾಲ್ಗೊಂಡು ಶುಭ ಹಾರೈಸಿ ಮಂಡಳಿಯ ಬೆಳವಣಿಗೆಗೆ ದುಡಿದು ಒಟ್ಟಾಗಿ ಮುಂದಡಿ ಇಡೋಣವೆಂದು ಈ ಸಂದರ್ಭದಲ್ಲಿ ಒಮ್ಮ ನಸ್ಸಿನಿಂದ ಘೋಷಿಸಿ ಶೋಭಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಪ್ರಮೋದ್ ಕೋಟ್ಯಾನ್, ಡೈನ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಸುರೇಶ್ ಪೂಜಾರಿ, ಸದಾನಂದ್ ಹೋಟೆಲ್‌ನ ಸತೀಶ್ ಜೆ ಪೂಜಾರಿ, ವಿಜಯ್ ಪಂಜಾಬ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಪ್ರಸಾದ್ ಪೂಜಾರಿ, ಕೃಷ್ಣ ಫ್ಯಾಮಿಲಿ ರೆಸ್ಟೋರೆಂಟ್‌ನ ರಾಕೇಶ್ ಪೂಜಾರಿ, ಕೃಷ್ಣ ಏನೆಕ್ಸ್ ಇಂದ್ರಲೋಕ್ ಇದರ ವಿಠಲ್ ಪೂಜಾರಿ ಹಾಗೂ ಪರಿಸರದ ಹಿರಿಯ ಗಣ್ಯರು, ದಾನಿಗಳು, ಸರ್ವ ಸಮಾಜದ ಸಂಘಟಕರು ಪೂರ್ಣ ಬೆಂಬಲ ಮತ್ತು ಸಹಕಾರ ವ್ಯಕ್ತಪಡಿಸಿ ನಾರಾಯಣ ಗುರು ಭಜನಾ ಮಂಡಳಿಗೆ ಶುಭ ಹಾರೈಸಿ ಅಧ್ಯಕ್ಷರಾಗಿ ಆಯ್ಕೆಯಾದ ಉದಯ್ ಡಿ. ಸುವರ್ಣರನ್ನು ಅಭಿನಂದಿಸಿದರು.