ಮಂಗಳೂರು ಬೆಂಗಳೂರು ಸಂಚಾರ ಮಾರ್ಗದಲ್ಲಿ ಮಹತ್ವದ ಬದಲಾವಣೆ

0
303

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಲಿರುವ ಕಾರಣ ಮಂಗಳೂರು ಬೆಂಗಳೂರು ಸಂಚಾರ  ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಪ್ರತಿಭಟನೆಯ ಕಾರಣ ಸಂಚಾರ ದಟ್ಟಣೆ ಉಂಟಾಗುವುದನ್ನು ತಪ್ಪಿಸುವುದಕ್ಕಾಗಿ ಮಂಗಳೂರು ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಗರ ಹೊರವಲಯದ ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಈ ಮೈದಾನ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73 ರ ಪಕ್ಕದಲ್ಲೇ ಇದೆ. ಹೀಗಾಗಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ.

ಶುಕ್ರವಾರ ಮಧ್ಯಾಹ್ನ 12 ರಿಂದ ರಾತ್ರಿ 9 ರವರೆಗೆ ಪರ್ಯಾಯ ಮಾರ್ಗ ಬಳಸುವಂತೆ ಮಂಗಳೂರು ಪೊಲೀಸರು ಸೂಚನೆ ನೀಡಿದ್ದಾರೆ.

ಮಂಗಳೂರು ಬೆಂಗಳೂರು ಸಂಚಾರ: ಪರ್ಯಾಯ ಮಾರ್ಗಗಳು ಯಾವುವು?

  • ಪಂಪುವೆಲ್ / ನಂತೂರು – ಪಡೀಲ್ – ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ಅರ್ಕುಳ – ಪರಂಗಿಪೇಟೆ – ತುಂಬೆ – ಬಿ.ಸಿ.ರೋಡ್ ರಸ್ತೆಯಲ್ಲಿ ಮಂಗಳೂರು ನಗರಕ್ಕೆ ಬರುವ ಹಾಗೂ ಹೋಗುವ ಘನ ವಾಹನಗಳು, ಎಲ್ಲಾ ತರಹದ ಸರಕು ವಾಹನಗಳು ಹಾಗೂ ಬಸ್ಸುಗಳ ಸಂಚಾರಕ್ಕಾಗಿ ಬದಲಿ ಮಾರ್ಗ ಉಪಯೋಗಿಸಬೇಕು.
  • ಪಡೀಲ್ – ಕಣ್ಣೂರು – ಅಡ್ಯಾರ್ ಕಟ್ಟೆ ರಸ್ತೆಯಲ್ಲಿ ಮಂಗಳೂರು ನಗರಕ್ಕೆ ಬರುವ ಹಾಗೂ ಹೊರಡುವ ಎಲ್ಲಾ ತರಹದ ಲಘು ವಾಹನಗಳು ಮತ್ತು ದ್ವಿ-ಚಕ್ರ ವಾಹನಗಳ ಚಾಲಕರು / ಸವಾರರು ಬದಲಿ ಮಾರ್ಗ ಉಪಯೋಗಿಸಬೇಕು.
  • ಪಂಪುವೆಲ್ / ನಂತೂರು – ಪಡೀಲ್ – ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ಅರ್ಕುಳ – ಪರಂಗಿಪೇಟೆ – ತುಂಬೆ – ಬಿ.ಸಿ.ರೋಡ್ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬಾರದು.
  • ಮೆಲ್ಕಾರು ಜಂಕ್ಷನ್- ಪುತ್ತೂರು/ಬಂಟ್ವಾಳ/ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ/ ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್ – ಬೊಳಿಯಾರ್ – ಮುಡಿಪು – ದೇರಳಕಟ್ಟೆ – ತೊಕ್ಕೊಟ್ಟು ಮೂಲಕ ಸಂಚರಿಸುವುದು.
  • ಬಿ.ಸಿ. ರೋಡ್ ಪೊಳಲಿ ದ್ವಾರ-ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಪೊಳಲಿ ದ್ವಾರದ ಮೂಲಕ ಕಲ್ಪನೆ ಜಂಕ್ಷನ್ – ನೀರುಮಾರ್ಗ – ಬೈತುರ್ಲಿ – ಕುಲಶೇಖರ – ನಂತೂರು ಮೂಲಕ ಸಂಚರಿಸುವುದು.
  • ವಳಚ್ಚಿಲ್ ಜಂಕ್ಷನ್-ಬಿ.ಸಿ.ರೋಡ್ / ತುಂಬೆ / ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ವಳಚ್ಚಿಲ್‌ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು – ನೀರುಮಾರ್ಗ – ಬೈತುರ್ಲಿ – ನಂತೂರು ಮೂಲಕ ಸಂಚರಿಸುವುದು.
  • ಅಡ್ಯಾರ್ ಕಟ್ಟೆ-ಬಿ.ಸಿ.ರೋಡ್ / ತುಂಬೆ / ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್ – ಕೊಣಾಜೆ – ದೇರಳಕಟ್ಟೆ – ತೊಕ್ಕೊಟ್ಟು ಮೂಲಕ ಸಂಚರಿಸುವುದು.
  • ಪಂಪ್‌ವೆಲ್ ಜಂಕ್ಷನ್- ಮಂಗಳೂರು ನಗರದ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳಿಯಾರ್ – ಮೆಲ್ಕಾರ್ ಮೂಲಕ ಸಂಚರಿಸುವುದು.
  • ನಂತೂರು ವೃತ್ತ- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ – ಕುಲಶೇಖರ – ಬೈತುರ್ಲಿ ಜಂಕ್ಷನ್ – ನೀರುಮಾರ್ಗ – ಕಲ್ಪನೆ ಜಂಕ್ಷನ್- ಬಿ.ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಸಂಚರಿಸುವುದು.
  • ಕೆ.ಪಿ.ಟಿ. ವೃತ್ತ- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ – ಪಚ್ಚನಾಡಿ – ವಾಮಂಜೂರು – ಬೈತುರ್ಲಿ ಜಂಕ್ಷನ್ – ನೀರುಮಾರ್ಗ – ಕಲ್ಪನೆ ಮೂಲಕ ಅಥವಾ ಬೋಂದೆಲ್ – ಕಾವೂರು – ಬಜಪೆ – ಕೈಕಂಬ – ಮೂಡಬಿದ್ರೆ ಮೂಲಕ ಸಂಚರಿಸುವುದು.
  • ಮುಲ್ಕಿ ವಿಜಯಸನ್ನಿಧಿ- ಉಡುಪಿ / ಮುಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ – ಮೂಡಬಿದ್ರೆ – ಸಿದ್ದಕಟ್ಟೆ – ಬಂಟ್ವಾಳ ಮೂಲಕ ಸಂಚರಿಸುವುದು.
  • ಪಡುಬಿದ್ರೆ -ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ – ಮೂಡಬಿದ್ರೆ – ಸಿದ್ದಕಟ್ಟೆ – ಬಂಟ್ವಾಳ ಮೂಲಕ ಸಂಚರಿಸುವುದು.

LEAVE A REPLY

Please enter your comment!
Please enter your name here