ಸೈಲಸ್ ಪದವಿ ಪೂರ್ವ ಕಾಲೇಜು: ಫ್ರೆಶರ್ಸ್ ಡೇ ಮತ್ತು ಅಂತರಾಷ್ಟ್ರೀಯ ಯೋಗ ದಿನಾಚರಣೆ.

0
43

ಅಂಕ ಗಳಿಕೆ ವಿದ್ಯಾರ್ಥಿ ಜೀವನದ ಅಂತಿಮ ಗುರಿಯಾಗಬಾರದು .ಸಾಧಿಸುವ ಛಲ , ಮನೋದಾರ್ಢ್ಯ ವಿದ್ದರೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದಲ್ಲಿ ಯಶಸ್ವಿಯಾಗಲು ಸಾಧ್ಯ . ಜೀವನದಲ್ಲಿ ಕಡಿಮೆ ಅಂಕ ಪಡೆದುಕೊಂಡ ವಿದ್ಯಾರ್ಥಿಗಳೂ ಕೂಡ ಮುಂದೆ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಬದಲಾಗುತ್ತಾರೆ ಎಂದು ಡೈಜಿ ವರ್ಲ್ಡ್ ಚಾನಲ್ ಮುಖ್ಯಸ್ಥರಾದ ವಾಲ್ಟರ್ ನಂದಳಿಕೆ ಹೇಳಿದರು.
ಅವರು ಸೈಲಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ನೂತನ ವಿದ್ಯಾರ್ಥಿಗಳ ಪ್ರಾರಂಭೋತ್ಸವದ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೊದಲಿಗೆ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಯೋಗ ದಿನಾಚರಣೆಯ ಮಹತ್ವ ಮತ್ತು ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ಉಪನ್ಯಾಸಕಿ ದೇವಿ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಟ್ರಸ್ಟಿ ಶಾರ್ಲೆಟ್ ಮಾಬೆನ್, ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಮಯ ಹಾಗೂ ಗಮನ ಕೊಟ್ಟು ಹೆಚ್ಚಿನ ಸಾಧನೆ ತೋರುವಂತೆ ಮಾರ್ಗದರ್ಶನ ನೀಡಿದರು ಈ ಸಂದರ್ಭದಲ್ಲಿ ಎರಡು ಗಿನ್ನೆಸ್ ವಿಶ್ವ ದಾಖಲೆ ಹಾಗೂ ಏಳು ವರ್ಲ್ಡ್ ಬುಕ್ ರೆಕಾರ್ಡ್ ಹೊಂದಿರುವ ತನುಶ್ರೀ ಪಿತ್ರೋಡಿ ಇವರಿಂದ ಯೋಗ ಪ್ರದರ್ಶನ ನಡೆಯಿತು ಹಾಗೂ ಕಾಲೇಜಿನ ವತಿಯಿಂದ ಇವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಿನ್ಸಿಪಲ್ ಡಾ. ಜಾರ್ಜ್ ಉಪಸ್ಥಿತರಿದ್ದರು ನೂತನ ವಿದ್ಯಾರ್ಥಿಗಳಿಗೆ ಹಲವು ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಉಪನ್ಯಾಸಕಿ ಪ್ರಭಾ ಕಾರ್ಯಕ್ರಮವನ್ನು ಸಂಯೋಜಿಸಿದರು.

LEAVE A REPLY

Please enter your comment!
Please enter your name here