ಅ. 23 ರಂದು ಶ್ರೀಮತಿ ಗೌರಮ್ಮ ನರಹರಿಶೇಟ್ ಕಲ್ಯಾಣ ಮಂಟಪದ ಬೆಳ್ಳಿಹಬ್ಬದ ಸಮಾರಂಭ

0
18

ದಾವಣಗೆರೆಯ ಶ್ರೀಮತಿ ಗೌರಮ್ಮ ನರಹರಿಶೇಟ್ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ವಿನೋಬಾನಗರದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀಮತಿ ಗೌರಮ್ಮ ನರಹರಿಶೇಟ್ ಕಲ್ಯಾಣ ಮಂಟಪದ ಬೆಳ್ಳಿ ಹಬ್ಬದ ಸಂಭ್ರಮದ ಸಮಾರಂಭವನ್ನು ಆಗಸ್ಟ್ 23 ರಂದು ಶನಿವಾರ ಅಪರಾಹ್ನ 2.30ಕ್ಕೆ ಉದ್ಘಾಟನೆಯಾಗಲಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥರಾದ ನಲ್ಲೂರು ಲಕ್ಷö್ಮಣ್‌ರಾವ್ ತಿಳಿಸಿದ್ದಾರೆ.
ಸಮಾರಂಭದ ದಿವ್ಯ ಸಾನಿಧ್ಯದಲ್ಲಿ ದಾವಣಗೆರೆಯ ಆವರಗೊಳ್ಳ ಶ್ರೀಕ್ಷೇತ್ರದ ಪುರವರ್ಗ ಮಠದ ಮಹಾಸ್ವಾಮಿಗಳಾದ ಶ್ರೀ ಷ|| ಬ್ರ|| ಓಂಕಾರ ಶಿವಾಚಾರ್ಯರವರು ಉಪಸ್ಥಿತರಿರುತ್ತಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಗೌರಮ್ಮ ನರಹರಿಶೇಟ್ ಪ್ರತಿಷ್ಠಾನದ ಅಧ್ಯಕ್ಷರಾದ ನಲ್ಲೂರು ಬಿ.ಎನ್.ನಾಗರಾಜ್ ರೇವಣಕರ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೈವಜ್ಞ ಸಮಾಜದ ಅಧ್ಯಕ್ಷರಾದ ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್, ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ಆಗಮಿಸಲಿದ್ದಾರೆ.
ಶ್ರೀಮತಿ ಗೌರಮ್ಮ ನರಹರಿಶೇಟ್ ಕಲ್ಯಾಣ ಮಂಟಪದ ಆಡಳಿತ ಮಂಡಳಿಯ ಎನ್.ಶಿವಾನಂದ ರೇವಣಕರ್, ನಲ್ಲೂರು ಎಸ್.ರಾಜಕುಮಾರ್ ಗೌರವ ಉಪಸ್ಥಿತರಿರುತ್ತಾರೆ. ಶ್ರೀಮತಿ ಗೌರಮ್ಮ ನರಹರಿಶೇಟ್ ಕಲ್ಯಾಣ ಮಂಟಪದಲ್ಲಿ ನಡೆಯುವ ಈ ಬೆಳ್ಳಿಹಬ್ಬದ ಸಂಭ್ರಮದ ಸಮಾರಂಭಕ್ಕೆ ನಲ್ಲೂರು ಕುಟುಂಬ ಸರ್ವ ಸದಸ್ಯರೂ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಮಂಡಳಿಯ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್‌ಶೆಣೈ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here