ಶ್ರೀ ಲಲಿತಾ ಕಲಾನಿಕೇತನ ನೃತ್ಯ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮಾಚರಣೆ

0
19

300 ವಿಧ್ಯಾರ್ಥಿಗಳಿಂದ ಶ್ರೀ ವಿಷ್ಣುವಿನ ದಶಾವತಾರ ಸಾಂಸ್ಕೃತಿಕ ನೃತ್ಯ ಪ್ರದರ್ಶನ

ಬೆಂಗಳೂರು: ನೃತ್ಯ ಪರಂಪರೆಯಲ್ಲಿ ತನ್ನದೇ ಆದ ಹೆಸರು ಮಾಡಿರುವ ಶ್ರೀ ಲಲಿತಾ ಕಲಾನಿಕೇತನ ಸಂಸ್ಥೆಯ 25 ರ ವಸಂತದ ಸಂಭ್ರಮದ ರಜತ ಮಹೋತ್ಸವ ಸಮಾರಂಭವನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು.

ನಗರದ ಚೌಡಯ್ಯ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಲಲಿತ ಕಲಾ ನಿಕೇತನ ಸಂಸ್ಥೆಯ ಸಂಸ್ಥಾಪಕರಾದ ಗುರು ವಿದುಷಿ ಶ್ರೀಮತಿ ರೇಖಾ ಜಗದೀಶ್ ರವರು ಶಾಸಕರಾದ ದಿನೇಶ್ ಗುಂಡೂರಾವ್ ರವರನ್ನು ಸನ್ಮಾನಸಿದರು. ಈ ವೇಳೆ ಮಾತಾಡಿದ ಅವರು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಮಕ್ಕಳಿಗೆ ವಿಧ್ಯೆ ಕಲಿಸುವ ಮೂಲಕ ಕೆಲಸ ಮಾಡುತ್ತಿದ್ದು, ಅವರನ್ನು ನಾನು ಹೃತುಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.

ಇತಿಹಾಸದಲ್ಲಿ ಅಜರಾಮರ ಎನಿಸುವಂತೆ ಹೊಸ ಕಲಾ ಪ್ರಬೇಧವನ್ನು ಸೃಷ್ಟಿಸಿ, ಕಲಾ ಪ್ರಪಂಚದಲ್ಲಿ ತನ್ನದೇ ಛಾಪು ಮೂಡಿಸಿದ ಶ್ರೀ ಲಲಿತ ಕಲಾ ನಿಕೇತನದ ಸಂಸ್ಥೆಯ 300 ಕ್ಕೂ ಹೆಚ್ಚು ವಿಧ್ಯಾರ್ಥಿ ಬಳಗದೊಂದಿಗೆ ಶ್ರೀ ವಿಷ್ಣುವಿನ ದಶಾವತಾರ ಪ್ರಸ್ತುತ ಪಡಿಸುವ ಸಾಂಸ್ಕೃತಿಕ Stand ಪ್ರದರ್ಶಿಸಿದರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪ್ರೇಕ್ಷಕರು ಒಮ್ಮೆಲೇ ಎದ್ದು ನಿಂತು ಶ್ರೀನಿವಾಸ ಗೋವಿಂದ ಎಂದು ಎಲ್ಲೆಡೆ ಉದ್ಗಾರ ಅವಿಸ್ಮರಣೀಯವಾಗಿತ್ತು.
ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯೊಂದಿಗಿನ ಅವರ ಅಮೂಲ್ಯ ಸಂಬಂಧವನ್ನು ಗುರುತಿಸಿ “ಬೆಳ್ಳಿ ತಾರೆ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಪರಂಪರ ಕಲಾ ಕುಸುಮ ಆಚರಣೆಯ ಭಾಗವಾಗಿ ಸಂಸ್ಥೆಯ ಅಧ್ಯಕ್ಷರು ಗೊಂಬೆಮನೆ ಲಲಿತಮ್ಮ ಮತ್ತು ಗುರು ವಿದುಷಿ ರೇಖಾ ಜಗದೀಶ್ ಮತ್ತು ಅವರ ಪುತ್ರ ಜೆ. ಮನು ಅವರು ಮೇಲಿನ ಗಣ್ಯ ಕಲಾವಿದರು ಮತ್ತು ಕುಟುಂಬಗಳೊಂದಿಗೆ ಒಟ್ಟಾಗಿ ನೃತ್ಯ ಪ್ರದರ್ಶನ ನಡೆಯಿತು.

ಶ್ರೀ ಲಲಿತ ಕಲಾ ನಿಕೇತನ ಸಂಸ್ಥೆಯಿಂದ ರವಿಂದ್ರ ಕಲಾದಲ್ಲಿ ನೃತ್ಯ ಮತ್ತು ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಅಮೂಲ್ಯ ಸಾಧನೆ ಮಾಡಿರುವ 25bಕ್ಕೂ ಹೆಚ್ಚು ಕಲಾವಿದರಿಗೆ ಲಲಿತಾಶ್ರೀ ಪ್ರಶಸ್ತಿ, ಕಲಾತಪಸ್ವಿ ಪ್ರಶಸ್ತಿ , ಪರಂಪರ ಕಲಾ ಕುಸುಮ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಖ್ಯಾತ ಭರತನಾಟ್ಯ ಪ್ರತಿಪಾದಕರು ಮತ್ತು ಗುರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗುರು ಡಾ. ರಾಧಾ ಶ್ರೀಧರ್, ಭಾರತೀಯ ಕನ್ಸರ್ವೇಟರಿ ಆಫ್ ಪ್ಯಾರಿಸ್ ಕರ್ನಾಟಕ ಗಾಯಕ ಸಂಸ್ಥಾಪಕ- ಅಧ್ಯಕ್ಷರಾದ ವಿಧುಷಿ ಭಾವನ ಪ್ರದ್ಯುಮ್ನ, ಗುರು ಉಷಾ ದಾತಾರ್ , ಖ್ಯಾತ ಮೋಹಿನಿಯಾಟ್ಟಂ ಗುರುಗಳಾದ ಗುರು ಗೋಪಿಕಾ ವರ್ಮ ಅವರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನ ಮಾಡಲಾಯಿತು.

LEAVE A REPLY

Please enter your comment!
Please enter your name here