ಗಾಯಕರಾದ ಕ್ಷಿತಿ.ಕೆ.ರೈ ಮತ್ತು ಶ್ರೇಷ್ಠ ಆಳ್ವ ಇವರಿಗೆ ಆಮಂತ್ರಣ ಸತ್ಯಶ್ರೀ ಗೌರವ

0
9

ಪುತ್ತೂರು ವಿದ್ಯಾಮಾತಾ ಸಭಾಂಗಣದಲ್ಲಿ ನಡೆದ ಪುತ್ತೂರು ಆಮಂತ್ರಣ ವೇದಿಕೆಯ ಪದಗ್ರಹಣ ಸಮಾರಂಭದ ವೇದಿಕೆಯ ಕಾರ‍್ಯಕ್ರಮದಲ್ಲಿ ಝೀ ಟಿವಿ ಕನ್ನಡ ಸರಿಗಮಪ ಖ್ಯಾತಿಯ ಕ್ಷಿತಿ.ಕೆ.ರೈ ಧರ್ಮಸ್ಥಳ
ಗಾಯಕಿ ಶ್ರೇಷ್ಠ ಆಳ್ವ ಪುತ್ತೂರು ಇವರಿಗೆ ಆಮಂತ್ರಣ ದಶಮಾನೋತ್ಸವ ವರ್ಷದ ಸತ್ಯಶ್ರೀ ಪುರಸ್ಕಾರ ನೀಡಲಾಯಿತು.

ಬಿ.ಭುಜಬಲಿ ಧರ್ಮಸ್ಥಳ, ಆಮಂತ್ರಣ ದ.ಕ ಜಿಲ್ಲಾಧ್ಯಕ್ಷೆ ವಿಂಧ್ಯಾ ಎಸ್.ರೈ, ಉಡುಪಿ ಜಿಲ್ಲಾಧ್ಯಕ್ಷೆ ಪುಷ್ಪ ಪ್ರಸಾದ್ ಮಲ್ಲಿನಾಥ್ ಜೈನ್ ಧರ್ಮಸ್ಥಳ, ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ಅರುಣ್ ಅರುವ, ಪುತ್ತೂರು ಆಮಂತ್ರಣ ವೇದಿಕೆಯ ಅಧ್ಯಕ್ಷೆ ಆಶಾ ಮಯ್ಯ ಹಾಗೂ ಪದಾಧಿಕಾರಿಗಳು ಬಂಟ್ವಾಳ ಆಮಂತ್ರಣ ಅಧ್ಯಕ್ಷೆ ರಶ್ಮಿತ ಸುರೇಶ್ ಜೋಗಿಬೆಟ್ಟು, ಮಂಗಳೂರು ಆಮಂತ್ರಣ ಅಧ್ಯಕ್ಷರಾದ ಲತೇಶ್ ಪುತ್ರನ್,
ಶ್ವೇತಾ ದಿಲೀಪ್ ನಾರಾವಿ,ಕಿಶೋರ್ ಶೆಟ್ಟಿ ಧರ್ಮಸ್ಥಳ ಉಷಾ ಆಳ್ವ ಪುತ್ತೂರು, ಪುತ್ತೂರು ವೇದಿಕೆಯ ಜೊತೆ ಕರ‍್ಯದರ್ಶಿ ಅಕ್ಷತಾ ನಾಗನಕಜೆ, ಧನರಾಜ್ ಅಚಾರ್ಯ ಬೆಳ್ತಂಗಡಿ, ಪ್ರಕಾಶ್ ಆಚಾರ್ಯ ಮೂಡುಬಿದಿರೆ ಉಪಸ್ಥಿತರಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಪ್ರತಿಭಾನ್ವಿತರ ಪರಿಚಯ ಮಾಡಿದರು.

LEAVE A REPLY

Please enter your comment!
Please enter your name here