ಯಮುನಾ ನದಿಯಲ್ಲಿ ಮುಳುಗಿ ಆರು ಬಾಲಕಿಯರು ಸಾವು..!

0
575


ಯುಮುನಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಆರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕಂದರ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಇಡೀ ಗ್ರಾಮವನ್ನೇ ಶೋಕದಲ್ಲಿ ಮುಳುಗಿಸಿದೆ.

ಮೃತರನ್ನು ಮುಸ್ಕಾನ್ (18), ಶಿವಾನಿ (17), ನೈನಾ (14), ದಿವ್ಯಾ (13), ಸಂಧ್ಯಾ (12), ಮತ್ತು ಸೋನಮ್ (12) ಎಂದು ಗುರುತಿಸಲಾಗಿದೆ.
ಎಲ್ಲರೂ ಹತ್ತಿರದ ಸಂಬಂಧಿಕರಾಗಿದ್ದಾರೆ.

‘ಮೊದಲಿಗೆ ನದಿಯ ದಡದಲ್ಲಿ ಆಟವಾಡುತ್ತಾ ವಿಡಿಯೊ ಮಾಡುತ್ತಿದ್ದ ಬಾಲಕಿಯರು ನಂತರ ನೀರಿನ ಆಳಕ್ಕೆ ಹೋಗಿದ್ದರು. ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ನದಿಯ ದಡದ ಬಳಿಯಿದ್ದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯರು, ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು ನದಿಗೆ ಇಳಿದಿದ್ದರು. ಇಂತಹ ದುರ್ಘಟನೆ ಸಂಭವಿಸುತ್ತದೆ ಎಂದು ಗೊತ್ತಿದ್ದರೆ, ಅಲ್ಲಿಗೆ ಹೋಗುವುದು ಬೇಡ ಎನ್ನುತ್ತಿದ್ದೆ’ ಎಂದು ಸಂಬಂಧಿಕರೊಬ್ಬರು ಕಣ್ಣೀರು ಸುರಿಸಿದ್ದಾರೆ.

ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಸೋನಮ್‌ ಮತ್ತು ಮಸ್ಕಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here