ವರದಿ ರಾಯಿ ರಾಜ ಕುಮಾರ
ಮಂಗಳೂರಿನ ಸ್ಥಾನಿಕ ಬ್ರಾಹ್ಮಣ ಮಹಾಮಂಡಲ, ಸುಬ್ರಹ್ಮಣ್ಯ ಸಭಾ ಸದನ ಆಯೋಜನೆಯಲ್ಲಿ ಹುತ್ತೂರು ಶಿವ ಬ್ರಾಹ್ಮಣ ಸಮಾಜ ಸೇವಾ ಸಂಘದ ಆತಿಥ್ಯದಲ್ಲಿ ಸ್ಥಾನಿಕ ಬ್ರಾಹ್ಮಣ ಜಾಗತಿಕ ಸಮಾವೇಶ ಪುತ್ತೂರಿನ ಶಿವ ಕೃಪ ಸಭಾಭವನದಲ್ಲಿ ಜನವರಿ 24 ಹಾಗೂ 25ರಂದು ನಡೆಯುತ್ತಿದೆ. ಶೃಂಗೇರಿ ಉಭಯ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಉದ್ಘಾಟನೆಯನ್ನು ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ನೆರವೇರಿಸಿದರು. ಅವರು ತಮ್ಮ ಆಶೀರ್ವಚನದಲ್ಲಿ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಂಘಟನೆಯಲ್ಲಿ ಬಲಿಷ್ಠ ಗೊಳ್ಳುತ್ತಿರುವುದು ಸಂತಸ ಕರ ಸಂಗತಿ. ಹಿರಿಯರೊಂದಿಗೆ ಮನೆಯ ಮಕ್ಕಳನ್ನು ನೋಡುವ ಭಾಗ್ಯ ದೊರಕಬೇಕು. ಸಂಸ್ಕಾರ ಒಳ್ಳೆಯತನಗಳು ಮುಂದಿನ ಪೀಳಿಗೆಗೂ ಮುಂದುವರಿಯಬೇಕು ಅದಕ್ಕಾಗಿ ಮಕ್ಕಳು ಸಮಾವೇಶಗಳಲ್ಲಿ ಭಾಗವಹಿಸಿ ತಿಳಿದುಕೊಳ್ಳುವಂತಾಗಬೇಕೆಂದು ಕೇಳಿಕೊಂಡರು.

ಪ್ರಧಾನ ಉಪನ್ಯಾಸಕರಾಗಿ ಆಗಮಿಸಿದ್ದ ಮಾಜಿ ಧಾರ್ಮಿಕ ಪರಿಷತ್ ಸದಸ್ಯ ಕಶೆ ಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ ನಿತ್ಯಾನುಸ್ಥಾನವನ್ನು ಬ್ರಾಹ್ಮಣ್ಯವನ್ನು ಉಳಿಸಿಕೊಂಡು ಗೌರವವನ್ನು ಪಡೆಯುವ ಹಂತಕ್ಕೆ ಸ್ತಾನಿಕರು ಮತ್ತೆ ಪ್ರಯತ್ನಿಸಬೇಕು. ನಮ್ಮ ತನವನ್ನು ನಾವು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಮಕ್ಕಳಲ್ಲಿ ಅಂತಹ ಪ್ರೇರಣೆಯನ್ನು ನೀಡಿ ಬೆಳೆಸಬೇಕು. ಮೂಲ ದಾಖಲೆಗಳಲ್ಲಿ ಉಡುಪಿಯ ಗುರುರಾಜ ಭಟ್ ಸಂಗ್ರಹಿಸಿ ನೀಡಿದ ಸ್ಥಾನಿಕರ ಶ್ರೇಷ್ಠತೆಯನ್ನು ಅರಿತುಕೊಂಡು ಮುಂದಿನ ಪೀಳಿಗೆಯನ್ನು ಬೆಳೆಸಬೇಕು ಎಂದು ಆಶಿಸಿದರು.
ಮುಂಜಾನೆ 5:00ಯಿಂದ ಪ್ರಾರಂಭವಾಗಿದ್ದ ಗಣಪತಿ ಹವನ, ಸುಬ್ರಹ್ಮಣ್ಯ ಹೋಮ, ವೈದಿಕ ಶಿಬಿರ, ರುದ್ರ ಪಾರಾಯಣ, ಭಜನಾ ಕಾರ್ಯಕ್ರಮಗಳ ತರುವಾಯ ಪಡುಮಲೆ ಮಧುಮಿತ ಅವರಿಂದ ವೀಣೆ ವಾದನ ನಡೆದು ಸಭಾ ಕಾರ್ಯಕ್ರಮ ಮುಂದುವರೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಮಂಡಲದ ಅಧ್ಯಕ್ಷ ಮಂಜುನಾಥ ಹೆಬ್ಬಾರ್ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್ಕೆ ಜಗನ್ ನಿವಾಸ ರಾವ್ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕೋಟೆಕಾರು ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯ ಶಂಕರ ಬಳ್ಳಾವ, ಮಹಾಮಂಡಲದ ಸ್ಥಾಪಕ ಅಧ್ಯಕ್ಷ ಸಿ ಎಸ್ ರಾವ್, ಪುತ್ತೂರು ನಗರಸಭಾ ಆಯುಕ್ತ ವಿದ್ಯಾ ಕಾಳೆ, ಬೆಂಗಳೂರು ಅಖಿಲ ಭಾರತ ಸ್ತಾನಿಕ ಬ್ರಾಹ್ಮಣ ಸಭಾದ ಮಾಜಿ ಅಧ್ಯಕ್ಷ ಶಿವರಾವ್ ಅಜ್ಜಾವರ, ಹಾಗೂ 19 ಸದಸ್ಯ ಸಂಘಗಳ ಅಧ್ಯಕ್ಷರು ವೇದಿಕೆಯಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಸ್ಥಾನಿಕ ಬೆಳಕು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಸಮಾಜ ಸಂಘಟನೆ ಹಾಗೂ ಅಭಿವೃದ್ಧಿಯಲ್ಲಿ ಯುವಜನತೆಯ ಹೊಣೆ ಎಂಬ ಗೋಷ್ಠಿಯನ್ನು ಮಂಗಳೂರು ರಾಮಕೃಷ್ಣ ಮಿಷನ್ ಬೆಳ್ಳರ್ಪಾಡಿ ರಂಜನ್, ಪುತ್ತೂರು ಡಾ. ಗೀತಾ ಶಾನುಭಾಗ್ ಕಾರ್ಕಳ ಕಮಾಂಡರ್ ಅಶ್ವಿನ್ ರಾವ್ ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮದ ತರುವಾಯ ಪಡುಬಿದ್ರಿ, ಬ್ರಹ್ಮಾವರ, ಕುಂದಾಪುರ, ಕಾಸರಗೋಡು, ಬೆಳ್ತಂಗಡಿ, ಉಡುಪಿ, ಸುಳ್ಯ, ಮುಂಬೈ, ಮೈಸೂರು, ಮೂಡುಬಿದರೆ ಸಂಘಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

