SKDRDP: ಸುಲ್ಕೇರಿ ಶ್ರೀರಾಮ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0
109

ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಗುರುವಾಯನಕೆರೆ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ನಾರಾವಿ ವಲಯ ಇವುಗಳ ಸಂಯುಕ್ತಾ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆ ಸುಲ್ಕೇರಿಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಸುಲ್ಕೇರಿ ಶಾಲೆಗೆ 10 ಜೊತೆ ಬೆಂಚು-ಡೆಸ್ಕು ವಿತರಣೆ ಮತ್ತು ಜ್ಞಾನದೀಪ ಶಿಕ್ಷಕಿ ನೇಮಕ ಆಯ್ಕೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿವೇಕ್ ವಿನ್ಸೆಂಟ್ ಪಾಯಸ್ ರವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೆಟ್ಟ ದುಶ್ಚಟಗಳ ದುರಾಭ್ಯಾಸದಿಂದ ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಬರುವ ಎಡವು ತೊಡಕುಗಳ ಬಗ್ಗೆ ಮನಮುಟ್ಟುವಂತೆ ಅರಿವು ಮೂಡಿಸಿ ಜನಜಾಗೃತಿಯ ಪ್ರತಿಜ್ಞಾ ವಿಧಿ ಬೋಧಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜು ಪೂಜಾರಿಯವರು ವಹಿಸಿ ಉದ್ಘಾಟನೆ ಮಾಡಿದರು. ಪ್ರಾಸ್ತವಿಕವಾಗಿ SKDRDP ಗುರುವಾಯನಕೆರೆ ಕಚೇರಿಯ ಯೋಜನಾಧಿಕಾರಿ ಅಶೋಕ್ ರವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ಹಾದಿ ಮತ್ತು ವಿವಿಧ ಸೌಲಭ್ಯಗಳು ಹಾಗೂ ಇತರ ಸಂಘ ಸಂಸ್ಥೆಗಳ ಮತ್ತು ಶಾಲಾ, ಮಠ, ಮಂದಿರಗಳ ಅಭಿವೃದ್ಧಿ- ಜೀರ್ಣೋದ್ಧಾರಗಳಿಗೆ ಕ್ಷೇತ್ರದಿಂದ ನೀಡುವ ಅನುದಾನ, ಸಹಾಯ ಧನ ನೀಡುವ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಮಾರ್ಗದರ್ಶನ ನೀಡಿದರು.
ಈ ಸಭಾ ಕಾರ್ಯಕ್ರಮದಲ್ಲಿ ತಾಲೂಕು ಕೇಂದ್ರ ಒಕ್ಕೂಟಗಳ ಅಧ್ಯಕ್ಷರಾದ ಸದಾನಂದ ಬಂಗೇರ , ತಾಲೂಕು ಜನಜಾಗ್ರತಿ ವೇದಿಕೆಯ ಸದಸ್ಯರಾದ ಸದಾನಂದ ಗೌಡ, ಸುಲ್ಕೇರಿ ಒಕ್ಕೂಟದ ಅಧ್ಯಕ್ಷರಾದ ಯಶೋಧರ ಪೂಜಾರಿ , ಗ್ರಾಮ ಜನಜಾಗೃತಿ ಸಮಿತಿಯ ಅಧ್ಯಕ್ಷರಾದ ರಾಮ ಶೆಟ್ಟಿ, ನಾರಾವಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ದಿನೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ಗ್ರಾಮದ ಸೇವಾಪ್ರತಿನಿಧಿ ಮಮತಾ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು/ಅಧ್ಯಾಪಕ ವೃಂದ ಮತ್ತು 130 ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕಿ ವಿಶಾಲ ಕೆ. ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಹ ಶಿಕ್ಷಕಿ ಕವಿತಾ ಶರ್ಮರವರು ಅತಿಥಿ, ಗಣ್ಯರು ಎಲ್ಲರನ್ನು ಸ್ವಾಗತಿಸಿ, ಶೌರ್ಯ ವಿಪತ್ತು ಘಟಕದ ಸದಸ್ಯರಾದ ದಯಾಕರ್ ರೈ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here