ಬಂಟ್ವಾಳ: ತುಳುನಾಡಿನ ಆಚರಣೆಗಳು ತನ್ನದೇ ಆದ ವೈಶಿಷ್ಟ್ಯಗಳಿಂದ ವಿಶ್ವಕ್ಕೆ ಮಾದರಿಯಾಗಿದೆ, ಇಲ್ಲಿನ ಸಂಸ್ಕೃತಿ, ಆಹಾರ ಪದ್ಧತಿಗೆ ತನ್ನದೇ ಆದ ಪ್ರಾಮುಖ್ಯತೆ ಪಡೆದಿದ್ದು ಅದು ಇಂದು ನಶಿಸಿಹೋಗುವ ಹಂತದಲ್ಲಿದ್ದು ಅದನ್ನು ಉಳಿಸುವ ದೃಷ್ಟಿಯಿಂದ ಯುವ ಜನಾಂಗಕ್ಕೆ ತಿಳಿ ಹೇಳಲು ಆಟಿದ ಲೇಸು ಮುಂತಾದ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಹೇಳಿದರು.
ಅವರು ಭಾನುವಾರ ಕಾಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ವಗ್ಗ ವಲಯದ ಕಾಡಬೆಟ್ಟು ಒಕ್ಕೂಟ ಮತ್ತು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕ ಕಾಡಬೆಟ್ಟು ವಗ್ಗ ವತಿಯಿಂದ ನಡೆದ “ಆಟಿದ ಲೇಸು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಶೃತಾಂಜನ್ ಜೈನ್ ಆಲಂಪುರಿ ಗುತ್ತು ವಹಿಸಿದ್ದರು.
ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.)ವಗ್ಗ ದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ರವರು ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಮಾಧವ್ ಕುಲಾಲರ ಜೊತೆ ಚೆನ್ನೆಮನೆ ಆಟ ಆಡಿ ತುಳುನಾಡಿನ ಜನರ ಆಟಿ ತಿಂಗಳ ಕ್ರೀಡೆ, ಆಹಾರ ಪದ್ಧತಿ, ನಮ್ಮ ಹಿರಿಯರು ಆಹಾರ ಪದ್ಧತಿ ಮಾಡಲು ಕಾರಣ ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಹೇಳಿ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುವ ಹೆಡ್ಡೆಯವರ ದೂರ ದೃಷ್ಟಿಯ ಯೋಜನೆಗಳು ಬಡವರ ಪಾಲಿನ ಆಶಾಕಿರಣ ವಾಗಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರಲು ಕಾರಣವಾಗಿದೆ. ಸರಕಾರ ಮಾಡದಂತ ಕಾರ್ಯವನ್ನು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕಾರಣವಾಗಿದ್ದಾರೆ.. ಅಂತಹ ಪೂಜನೀಯ ವ್ಯಕ್ತಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ನಮ್ಮ ಧಾರ್ಮಿಕ ಕೇಂದ್ರಗಳಿಗೆ ಮಸಿ ಬಲಿಸುವವರ ವಿರುದ್ಧ ನಾವು ಜಾಗೃತರಾಗಿ ಒಕ್ಕೋರಳಿನಿಂದ ವಿರೋಧಿಸಿ ಸೆಟೆದು ನಿಲ್ಲುವ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಮಾಡುವ ಆಹಾರ ಪದಾರ್ಥಗಳನ್ನು ಹಾಗೂ ನಮ್ಮ ಪೂರ್ವಿಕರು ಬಲಸುತ್ತಿದ್ದ ಹಿಂದಿನ ಕಾಲದ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಮಹಾಬಲ ಕುಲಾಲ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ, ಉದ್ಯಮಿ ಸುಜಿತ್ ಕುಮಾರ್ ಜೈನ್ ಪಿಲಿಂಗಾಲು, ಶ್ರೀ ಕ್ಷೇತ್ರ ಕಾರಿಂದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ತಾಲೂಕು ಜನಜಾಗತಿ ವೇದಿಕೆಯ ಸದಸ್ಯ ಸದಾನಂದ ನಾವುರ, ತಾಲೂಕು ಕೃಷಿ ಮೇಲ್ವಿಚಾರಕ ಭಾಸ್ಕರ್,ಯೋಜನೆಯ ವಗ್ಗ ವಲಯದ ಅಧ್ಯಕ್ಷ ಉಮೇಶ್, ಐಸಿರಿ ಎಲೆಕ್ಟ್ರಾನಿಕ್ಸ್ ಮಾಲಕ ನಾಗೇಶ್ ಮಧ್ವ, ತಾಲೂಕು ಎಂಇಎಸ್ ಯೋಜನಾಧಿಕಾರಿ ಪ್ರೇಮನಾಥ್,ಶೌರ್ಯ ವಿಪತ್ತು ಘಟಕದ ಬಂಟ್ವಾಳ ತಾಲೂಕು ಕ್ಯಾಪ್ಟನ್ ಪ್ರಕಾಶ್, ಕಾಡಬೆಟ್ಟು ಸರಕಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಫಿಲಿಂಗಾಲು, ಶಾಲಾ ಜ್ಞಾನದೀಪ ಶಿಕ್ಷಕಿ ಹರಿಣಾಕ್ಷಿ, ವಗ್ಗ ವಲಯ ಮೇಲ್ವಿಚಾರಕಿ ಸವಿತಾ, ಕಾಡಬೆಟ್ಟು ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಪ್ರವೀಣ್, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯ ಕಾಡಬೆಟ್ಟು ಒಕ್ಕೂಟದ ಪದಾಧಿಕಾರಿಗಳು ಸದಸ್ಯರುಗಳು, ಕಾಡಬೆಟ್ಟು ವಗ್ಗ ಶೌರ್ಯ ಘಟಕದ ಸದಸ್ಯರುಗಳು, ನವಜೀವನ ಸಮಿತಿಯ ಸದಸ್ಯರುಗಳು, ಕಾಡಬೆಟ್ಟು ಶಾಲಾ ಮಕ್ಕಳು, ಗ್ರಾಮಾಭಿವೃದ್ಧಿ ಯೋಜನೆಯ ಅಭಿಮಾನಿಗಳು ಉಪಸ್ಥಿತರಿದ್ದರು.
ದ್ರುವಿ ಪಿ ಕುಂದರ್ ಪ್ರಾರ್ಥಿಸಿ, ವಿ ಎಲ್ ಇ ಲೀಲಾವತಿ ಸ್ವಾಗತಿಸಿ, ಶೌರ್ಯ ಘಟಕ ಸಂಯೋಜಕೀ ರೇಖಾಪಿ ವಂದಿಸಿದರು. ನಿತಿನ್ ಮಧ್ವ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಟಿ ತಿಂಗಳ ವಿಶೇಷ ಖಾದ್ಯಗಳೊಂದಿಗೆ ಸಾಮೂಹಿಕ ಭೋಜನ ಮಾಡಲಾಯಿತು. ಹಾಗೂ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ಜರಗಿತು.