ದಾವಣಗೆರೆ ಸಿಟಿ. ಕೆ.ಟಿ.ಜೆ. ನಗರದ ವಾಸಿ ಭಜನೆ ಮಾಸ್ತರ್ ಮಾಂತೇಶ್ ಕಣ್ಣೂರು ರವರು ಸ್ವರ್ಗಸ್ಥರಾಗಿದ್ದು ಮೃತರು ನಗರದ ತುಂಬಾ ಸ್ವರ್ಗಸ್ಥರಾಗಿದ್ದವರ ಮನೆ ಹತ್ತಿರ, ನಗರದ ಹಲವಾರು ದೇವಸ್ಥಾನಗಳಲ್ಲಿ ಭಜನೆ ಮಾಡುತ್ತಿದ್ದು, ಇವರಿಗೆ ಭಜನೆ ಮಾಸ್ತರ್ ಎಂದು ಕರೆಯಲಾಗುತ್ತಿತ್ತು. ಮತೃರ ಕುಟುಂಬಕ್ಕೆ ಬಂಧು ಬಳಗ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ ಮೃತರಿಗೆ ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪನವರು ಸಂತಾಪ ಸೂಚಿಸಿದ್ದಾರೆ.

