ವಿಶ್ವ ಯುವ ಕೌಶಲ್ಯ ದಿನದ ಪ್ರಯುಕ್ತ ಯುವ ಪೀಳಿಗೆಗೆ ವೀಸಾ ನೀಡಿದ ಕೆಲವು ಆರ್ಥಿಕ ಸಲಹೆಗಳು

0
42

ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಭಾರತದ ಯುವಕರು ಹಣವನ್ನು ಸೂಕ್ತವಾಗಿ ನಿರ್ವಹಿಸಲು ಬೇಕಾದ ಕೌಶಲ್ಯಗಳನ್ನು ಕಲಿಯುತ್ತಿದ್ದಾರೆ. ಈ ವಿಶ್ವ ಯುವ ಕೌಶಲ್ಯ ದಿನದ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ಬಜೆಟ್‌ ರೂಪಿಸಲು, ಜಾಣತನದಿಂದ ಖರ್ಚು ಮಾಡಲು ಮತ್ತು ಆರ್ಥಿಕವಾಗಿ ಸುರಕ್ಷಿತ ಭವಿಷ್ಯವನ್ನು ರೂಪಿಸಲು ಅಗತ್ಯವಾದ ಆರ್ಥಿಕ ಕೌಶಲ್ಯಗಳನ್ನು ವೀಸಾ ಸಂಸ್ಥೆಯು ಯುವ ಪೀಳಿಗೆಯ ಜೊತೆ ಹಂಚಿಕೊಂಡಿದೆ. ಈ ಸಲಹೆಗಳು ಈ ಕೆಳಗಿನಂತಿವೆ:

  1. ಡಿಜಿಟಲ್ ಮೂಲಕ ಮಾಡುವ ಖರ್ಚಿನ ವಿಶ್ಲೇಷಣೆಮೊಬೈಲ್ ವ್ಯಾಲೆಟ್‌ ಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಿ. ಆಯಾ ಸಮಯದ ಅಲರ್ಟ್ ಗಳ ಮೂಲಕ ನೀವು ಮಾಡುವ ಖರ್ಚನ್ನು ಟ್ರ್ಯಾಕ್ ಮಾಡಿ. ವಿಶ್ಲೇಷಣೆ ಮಾಡಿ ಮತ್ತು ಕಡಿಮೆ ಮಾಡಿ. ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಗಳನ್ನು ಕೇವಲ ವಿಶ್ವಾಸಾರ್ಹ ಆಪ್‌ ಗಳ ಜೊತೆ ಮಾತ್ರ ಕನೆಕ್ಟ್ ಮಾಡುವ ಮೂಲಕ ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳಿ.
  2. ನಗದು ಹರಿವಿನ ನಿಯಂತ್ರಣಕ್ಕೆ ಆರ್ಥಿಕ ನಿರ್ವಹಣೆ ಅಗತ್ಯದೈನಂದಿನ ಮತ್ತು ಸಾಪ್ತಾಹಿಕ ಖರ್ಚುಗಳನ್ನು ನಿರ್ವಹಿಸಲು ಮಿತಿಗಳನ್ನು ನಿಗದಿಪಡಿಸುವ ಮೂಲಕ ಖರ್ಚಿನ ಮೇಲೆ ನಿಗಾ ಇಟ್ಟಿರಿ. ಎಸ್‌ಎಂಎಸ್ ಮತ್ತು ಆಪ್‌ ನೋಟಿಫಿಕೇಷನ್ ಅನ್ನು ಆನ್ ಮಾಡಿ ಮತ್ತು ಆ ಮೂಲಕ ಎಲ್ಲಾ ಹಣದ ಮೇಲೆ ಗಮನ ಇಟ್ಟಿರಿ. ಹೀಗೆ ಮಾಡುವುದರಿಂದ ನಿಮ್ಮ ನಗದು ಹರಿವಿನ ಮೇಲೆ ನಿಯಂತ್ರಣ ಹೊಂದಲು ಸಹಾಯವಾಗುತ್ತದೆ.
  3. ಡಿಜಿಟಲ್ ಪಾವತಿ ವಂಚನೆ ತಡೆಗಟ್ಟಲು ತಾಂತ್ರಿಕ ಪರಿಣತಿನಾವು ಪಾವತಿ ಮಾಡುವ ವಿಧಾನವನ್ನೇ ತಂತ್ರಜ್ಞಾನ ಬದಲಿಸುತ್ತಿದೆ. ಈಗ ಕನೆಕ್ಟೆಡ್ ಆಗಿರುವ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಮತ್ತು ವೇಗವಾಗಿರಲು ಬುದ್ಧಿವಂತ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಟ್ಯಾಪ್ ಟು ಪೇ ನಂತಹ ಸಂಪರ್ಕರಹಿತ ಪಾವತಿ ವಿಧಾನವನ್ನು ಗರಿಷ್ಠವಾಗಿ ಬಳಸಿಕೊಂಡು ಸುರಕ್ಷಿತವಾಗಿರಬಹುದಾಗಿದೆ. ಈ ಸೌಲಭ್ಯವು ಟೂ ಫ್ಯಾಕ್ಟರ್ ಅಥೆಂಟಿಕೇಷನ್ ಮತ್ತು ಎಐ-ಚಾಲಿತ ವಂಚನೆ ಪತ್ತೆ ಪ್ರಕ್ರಿಯೆ ಬಳಸಿಕೊಂಡು ಸುರಕ್ಷಿತವಾಗಿ ಮತ್ತು ಸುಗಮವಾಗಿ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ.
  4. ಸಂಘಟನೆ ಮತ್ತು ಸಮಯ ನಿರ್ವಹಣೆಡಿಜಿಟಲ್ ಉಪಕರಣಗಳನ್ನು ಬಳಸಿಕೊಂಡು ಪಾವತಿಗಳನ್ನು ಸ್ವಯಂಚಾಲಿತಗೊಳಿಸಿ. ಮುಂದೆ ಮಾಡಬೇಕಾಗುವ ಖರ್ಚುಗಳನ್ನು ಮೊದಲೇ ತಿಳಿದುಕೊಳ್ಳಿ ಮತ್ತು ನಿಮ್ಮ ಖರ್ಚನ್ನು ಸಣ್ಣ ಮತ್ತು ದೀರ್ಘಾವಧಿಯ ಗುರಿಗಳ ಜೊತೆ ಸೇರಿಸಿ. ಇಂದು ಮೊದಲೇ ಸ್ವಲ್ಪ ಯೋಜನೆ ಮಾಡುವುದರಿಂದ ನೀವು ಮುಂದಿನ ದಿನಗಳಿಗೆ ಸಿದ್ಧರಾಗುತ್ತೀರಿ ಮತ್ತು ನಿಮ್ಮ ಗುರಿಗಳನ್ನು ಸರಳಗೊಳಿಸುತ್ತೀರಿ.

ಅವಶ್ಯ ಕೌಶಲಗಳನ್ನು ಕಲಿತು ನಿಮ್ಮ ಹಣವನ್ನು ಇಂದು ಬುದ್ಧಿವಂತಿಕೆಯಿಂದ ನಿರ್ವಹಿಸುವುದರಿಂದ ನಾಳಿನ ಡಿಜಿಟಲ್ ಜಗತ್ತಿನಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here