ವರದಿ ರಾಯಿ ರಾಜ ಕುಮಾರ
ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜೂನಿಯರ್ ವಿಭಾಗದಲ್ಲಿ ಶಾಟ್ ಪುಟ್ ಹಾಗೂ 4×100 ಮೀ ಮಿಕ್ಷೆಡ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ 2 ಚಿನ್ನದ ಪದಕ ಹಾಗೂ 200 ಮೀ ಓಟದಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಪಡೆದು ಬೆಳುವಾಯಿ ವಿಶೇಷ ಸ್ಪೂರ್ತಿ ಶಾಲೆಗೆ ಕೀರ್ತಿ ತಂದ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಕು. ಸಹಳಾಗೆ ಶಾಲಾ ಆಡಳಿತ ಮಂಡಳಿ, ಸಾರ್ವಜನಿಕರು ಅಭಿನಂದಿಸಿದ್ದಾರೆ.

