ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗದಿಂದ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ

0
92

ವರದಿ ವಿನೋದ್ ಶೆಟ್ಟಿ ಉಡುಪಿ.

ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗ ಉದ್ಘಾಟನೆ ಪ್ರಯುಕ್ತ ಮಹಿಳೆಯರಿಗಾಗಿ ಮಹೆಂದಿ ಸ್ಪರ್ಧೆ ಜೊತೆ ವಿವಿಧ ಸ್ಪರ್ಧೆಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭವು ಉಡುಪಿಯ ಬ್ರಹ್ಮಗಿರಿಯಲ್ಲಿರುವ ನಮಿತಾ ನಿವಾಸ್ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ನಲ್ಲಿರುವ ಸಭಾಭವನದಲ್ಲಿ ಜರುಗಿತು.

ಈ ಭವ್ಯ ಸಭಾ ಕಾರ್ಯಕ್ರಮ ದಲ್ಲಿ ದೊಡ್ಡನ ಗುಡ್ಡೆಯ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಾದ ರಮಾನಂದ ಗುರೂಜಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ರಾಜಕೀಯ ಮುಖಂಡರು ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್ ಹೊಲಿಗೆ ಯಂತ್ರ ದ ಫಲಾನುಭವಿ ಯಾದ ಸುಜಾತ ರವರಿಗೆ ಹಸ್ತಾಂತರ ಮಾಡುತ್ತಾ ಪ್ರತಿಯೊಬ್ಬ ಮಹಿಳೆಯರು ಪ್ರಮುಖ ವಾಹಿನಿಯಲ್ಲಿ ತನ್ನ ಪ್ರತಿಭೆಯನ್ನು ಚಾಪನ್ನು ಮೂಡಿಸಿಕೊಳ್ಳುವ ಬಗ್ಗೆ ತಿಳಿಸಿದರು, ದೊಡ್ಡನ ಗುಡ್ಡೆಯ ಎ ವಿ ಬಾಳಿಕ ಆಸ್ಪತ್ರೆಯ ಆಡಳಿತ ನಿರ್ದೇಶಕರು ಆಗಿರುವ ಸೌಜನ್ಯ ಶೆಟ್ಟಿ ಅವರು ಮಾತನಾಡಿ ಮಹಿಳೆಯರಿಗೆ ಬೇಕಾಗುವ ಆರೋಗ್ಯ ಮಾಹಿತಿಗಳನ್ನು ನೀಡಿ ಶುಭ ಹಾರೈಸಿದರು, ಮಹಿಳಾ ಉದ್ಯಮಿ ರಾಜಕೀಯ ಮುಖಂಡರಾದ ಮಮತಾ ಶೆಟ್ಟಿ, ಬಿಜೆಪಿ ಮಹಿಳಾ ಮುಖಂಡರು ಸಮಾಜ ಸೇವಕರಾದ ವೀಣಾ ಶೆಟ್ಟಿ, ಮಾಜಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗದ ಸ್ಥಾಪಕರಾದ ವಿನೋದ್ ಶೆಟ್ಟಿ, ಅಧ್ಯಕ್ಷರಾದ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.

ಹಾಗೂ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಜಕೀಯ ಮುಖಂಡರು ಉದ್ಯಮಿಗಳಾದ ಹರಿ ಪ್ರಸಾದ್ ರೈ ಹಾಗೂ ಪ್ರಮುಖ ಅತಿಥಿಗಳು ಉಪಸ್ಥಿತಿ ಇದ್ದರು. ಉಡುಪಿಯ 5 ಮಹಿಳಾ ಚಂಡೆ ಬಳಗದ ಎಲ್ಲಾ ಸದಸ್ಯರಿಗೆ ಹಾಗೂ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು, ಕಾರ್ಯಕ್ರಮದ ಸ್ವಾಗತ ಭಾಷಣವನ್ನು ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗದ ಸ್ಥಾಪಕರಾದ ವಿನೋದ್ ಶೆಟ್ಟಿ ಅವರು ನೆರವೇರಿಸಿದರು, ಕಾರ್ಯಕ್ರಮ ನಿರೂಪಣೆಯನ್ನು ದಯಾನಂದ್ ರವರು, ಕಾರ್ಯಕ್ರಮದ ಧನ್ಯವಾದವನ್ನು ಕಾರ್ಯದರ್ಶಿಯಾದ ಪ್ರೀತಿ ಕಲ್ಯಾಣಪುರ ನೆರೆವೇರಿಸಿದರು.


LEAVE A REPLY

Please enter your comment!
Please enter your name here