ಹಬ್ಬದ ನಿಮಿತ್ತ ಬೆಂಗಳೂರು, ಮಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು 

0
168

ಮಂಗಳೂರು: ಗಣೇಶ ಚತುರ್ಥಿ , ದಸರಾ, ದೀಪಾವಳಿ ಹಬ್ಬದ ರಜೆಗಳ ಸಂದರ್ಭದಲ್ಲಿ ಬೆಂಗಳೂರು ಮತ್ತು ಮಂಗಳೂರಿನಿಂದ ಸಾಕಷ್ಟು ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ, ಸಾರ್ವಜನಿಕರ ಬೇಡಿಕೆ ಮೇರೆಗೆ ಬೆಂಗಳೂರು, ಮಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು ಕಾರ್ಯಾಚರಣೆ ಆರಂಭವಾಗಲಿದೆ. ಈ ಬಗ್ಗೆ ನೈಋತ್ಯ ರೈಲ್ವೆಯು ಸಾಮಾಜಿಕ ಮಾಧ್ಯಮ ಎಕ್ಸ್​​ ಮೂಲಕ ಮಾಹಿತಿ ನೀಡಿದೆ. ಯಾವ್ಯಾವ ಜಿಲ್ಲೆಗಳಿಗೆ ವಿಶೇಷ ರೈಲು ಓಡಿಸಲಾಗುತ್ತದೆ? ಮಾಹಿತಿ ಇಲ್ಲಿದೆ.

ಬೆಂಗಳೂರು-ಮಡಗಾಂವ್ ಎಕ್ಸ್​​ಪ್ರೆಸ್​​

ರೈಲು ಸಂಖ್ಯೆ 06569: ಎಸ್​ಎಮ್​ವಿಟಿ ಬೆಂಗಳೂರು-ಮಡಗಾಂವ್​ ರೈಲು ಆಗಸ್ಟ್​ 26 ರಂದು ಎಸ್​​ಎಮ್​ವಿಟಿ ಬೆಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ನಸುಕಿನ ಜಾವ 5:30ಕ್ಕೆ ಮಡಗಾಂವ್​ ತಲುಪಲಿದೆ.

ಇದೇ ರೈಲು ವಾಪಸ್​ 06570: ಆಗಸ್ಟ್​ 27 ರಂದು ಬೆಳಿಗ್ಗೆ 6:30ಕ್ಕೆ ಮಡಗಾಂವ್​ನಿಂದ ಹೊರಟು ಅದೇ ದಿನ ರಾತ್ರಿ 11:40 ಎಸ್​ಎಮ್​ವಿಟಿ ಬೆಂಗಳೂರು ತಲುಪಲಿದೆ.

ರೈಲು ನಿಲುಗಡೆ

ಈ ರೈಲು ಚಿಕ್ಕಬಾನಾವರ, ಕುಣಿಗಲ್​, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್​, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್​, ಅಂಕೋಲ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಬೆಂಗಳೂರು-ಬೀದರ್

ರೈಲು ಸಂಖ್ಯೆ 06549: ಎಸ್​ಎಮ್​ವಿಟಿ ಬೆಂಗಳೂರು-ಬೀದರ್​ ರೈಲು ಆಗಸ್ಟ್​ 26 ರಂದು ರಾತ್ರಿ 9:15ಕ್ಕೆ ಎಸ್​ಎಮ್​ವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 11:30ಕ್ಕೆ ಬೀದರ್ ತಲುಪಲಿದೆ.

ಇದೇ ರೈಲು ವಾಪಸ್​ 06550: ಬೀದರ್​ನಿಂದ ಆಗಸ್ಟ್​ 27 ರಂದು ಮಧ್ಯಾಹ್ನ 2:30ಕ್ಕೆ ಹೊರಟು ಮರುದಿನ ನಸುಕಿನ ಜಾವ 4:30ಕ್ಕೆ ಎಸ್​ಎಮ್​ವಿಟಿ ಬೆಂಗಳೂರು ತಲುಪಲಿದೆ.

ರೈಲು ನಿಲುಗಡೆ

ಯಲಹಂಕ, ಹಿಂದುಪುರ, ಧರ್ಮಾವರಮ್, ಅನಂತಪುರ, ಗುಂಟಕಲ್​, ಅದೋನಿ, ಮಂತ್ರಾಲಯಂ ರೋಡ್​, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಬಾದ್, ಕಲಬುರಗಿ ಮತ್ತು ಹುಮನಾಬಾದ​ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ರೈಲು ನಿಲುಗಡೆ

ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ. ಬೆಂಗಳೂರು-ಮಂಗಳೂರು

ಬೆಂಗಳೂರು-ಮಂಗಳೂರು

ರೈಲು ಸಂಖ್ಯೆ 06251: ಯಶವಂತಪುರ-ಮಂಗಳೂರು ಸೆಂಟ್ರಲ್​ ರೈಲು ಯಶವಂತಪುರದಿಂದ ಆಗಸ್ಟ್​ 25 ರಂದು ರಾತ್ರಿ 11:55ಕ್ಕೆ ಮರುದಿನ ಬೆಳಗ್ಗೆ 11:45 ಕ್ಕೆ ಮಂಗಳೂರು ಸೆಂಟ್ರಲ್​ಗೆ ತಲುಪುತ್ತದೆ.

ರೈಲು ಸಂಖ್ಯೆ 06252: ಮಂಗಳೂರು ಸೆಂಟ್ರಲ್​-ಯಶವಂತಪುರ ರೈಲು ಆಗಸ್ಟ್​ 26 ರಂದು ಮಧ್ಯಾಹ್ನ 1ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಅದೇ ದಿನ ರಾತ್ರಿ 10:40 ಕ್ಕೆ ಯಶವಂತಪುರ ತಲುಪುತ್ತದೆ.

ರೈಲು ಸಂಖ್ಯೆ 06253: ಯಶವಂತಪುರ-ಮಂಗಳೂರು ಸೆಂಟ್ರಲ್​ ರೈಲು ಆಗಸ್ಟ್​ 26 ರಂದು ಯಶವಂತಪುರದಿಂದ ರಾತ್ರಿ 11:55 ಕ್ಕೆ ಹೊರಟು ಮರುದಿನ ಬೆಳಗ್ಗೆ 11:45 ಮಂಗಳೂರು ಸೆಂಟ್ರಲ್ ತಲುಪುತ್ತದೆ.

ರೈಲು ಸಂಖ್ಯೆ 06254: ಮಂಗಳೂರು ಸೆಂಟ್ರಲ್-ಯಶವಂತಪುರ ರೈಲು ಆಗಸ್ಟ್​ 27 ರಂದು ಮಧ್ಯಾಹ್ನ 2:15 ಕ್ಕೆ ಮಂಗಳೂರು ಸೆಂಟ್ರಲ್​ನಿಂದ ಹೊರಟು ಅದೇ ದಿನ ರಾತ್ರಿ 11:50 ಕ್ಕೆ ಯಶವಂತಪುರ ತಲುಪಲಿದೆ.

ರೈಲು ನಿಲುಗಡೆ

ಈ ರೈಲುಗಳು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು ಮತ್ತು ಬಂಟವಾಳದಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಗಳಿವೆ.

ರೈಲು ಸಂಚಾರ ದಿನಾಂಕ ವಿಸ್ತರಣೆ

ಈ ಹಿಂದೆ ಆಗಸ್ಟ್​ 31 ರವರೆಗೆ ಸಂಚರಿಸುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 06539 SMVT ಬೆಂಗಳೂರು-ಬೀದರ್ ದ್ವೈವಾರಿಕ ವಿಶೇಷ ಎಕ್ಸ್‌ಪ್ರೆಸ್ ರೈಲು, ಸೆಪ್ಟೆಂಬರ್ 05 ರಿಂದ 28 ರವರೆಗೆ ಸಂಚರಿಸಲಿದೆ.

ಈ ಹಿಂದೆ ಸೆಪ್ಟೆಂಬರ್ 01 ರವರೆಗೆ ಸಂಚರಿಸುವುದಾಗಿ ಸೂಚಿಸಲಾಗಿದ್ದ ರೈಲು ಸಂಖ್ಯೆ 06540 ​​ಬೀದರ್-SMVT ಬೆಂಗಳೂರು ದ್ವೈವಾರಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಸೆಪ್ಟೆಂಬರ್​ 06 ರಿಂದ 29 ರವರೆಗೆ ಸಂಚರಿಸಲಿದೆ. ಈ ಹಿಂದೆ ಆಗಸ್ಟ್​ 25 ರವರೆಗೆ ಮಾತ್ರ ಸಂಚರಿಸುವುದಾಗಿ ಸೂಚಿಸಲಾಗಿದ್ದ ರೈಲು ಸಂಖ್ಯೆ 07315 SSS ಹುಬ್ಬಳ್ಳಿ-ಮುಜಫರ್‌ಪುರ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಸೆಪ್ಟೆಂಬರ್​ 01 ರಿಂದ 22 ರವರೆಗೆ ಸಂಚರಿಸಲಿದೆ. ಈ ಹಿಂದೆ ಆಗಸ್ಟ್​ 28 ರವರೆಗೆ ಮಾತ್ರ ಓಡುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 07316 ಮುಜಫರ್​ಪುರ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಸೆಪ್ಟೆಂಬರ್​ 04 ರಿಂದ 12 ರವರೆಗೆ ಓಡಲಿದೆ. ಈ ಹಿಂದೆ ಆಗಸ್ಟ್​ 25 ರವರೆಗೆ ಮಾತ್ರ ಓಡುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 07311 ವಾಸ್ಕೋ ಡ ಗಾಮಾ-ಮುಜಫರ್ ಪುರ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಸೆಪ್ಟೆಂಬರ್​ 8 ರಿಂದ 22 ರವರೆಗೆ ಓಡಲಿದೆ.

LEAVE A REPLY

Please enter your comment!
Please enter your name here