ಪಡುಕುಡೂರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಕುಡೂರು ಒಕ್ಕೂಟದ ಶ್ರೀ ಭದ್ರಕಾಳಿ ಮಹಿಳಾ ಜ್ಞಾನ ವಿಕಾಸ ಘಟಕದ ಪ್ರಥಮ ವಾರ್ಷಿಕೋತ್ಸವದಲ್ಲಿ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ತೃತೀಯ ಸ್ಥಾನ ಪಡೆದ ದೀಕ್ಷಾ, ಸುಚಿತಾ, ಸಾನ್ವಿಕಾ, ಪ್ರಣೀತಾ ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ರಮಿಕಾ, ಅನನ್ಯಾ, ಸಾಕ್ಷಿ ಹಾಗೂ ಚೆಸ್ ವಿಭಾಗದ ಉಡುಪಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಅದ್ವಿತೀಯವಾದ ಆಟದ ಮೂಲಕ 8 ನೇ ರ಼್ಯಾಂಕ್ ಪಡೆದ ಚಿನ್ಮಯ್ ಪೂಜಾರಿ ಹಾಗೂ ಕ್ರೀಡಾಪ್ರತಿಭೆ ಅನಾವರಣಕ್ಕೆ ಮಾರ್ಗದರ್ಶಕರಾದ ಉಡುಪಿ ಜಿಲ್ಲಾ ಅತ್ಯುತ್ತಮ ಸಾಧಕ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಹರೀಶ್.ಪೂಜಾರಿ.ಎಸ್. ಅವರನ್ನು ಗೌರವಿಸಲಾಯಿತು. ಶ್ರೀ ಭದ್ರಕಾಳಿ ಮಹಿಳಾ ಜ್ಞಾನ ವಿಕಾಸ ಘಟಕದ ಪದಾಧಿಕಾರಿಗಳು, ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು, ಪಡುಕುಡೂರು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.