ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ಪಣಿಯಾಡಿ ವಿಶ್ವ ಪರಿಸರ ದಿನಾಚರಣೆ

0
109

ಶ್ರೀ ಕ್ಷೇತ್ರ ಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ದೇವಾಲಯದ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ವಿಶ್ವ ಪರಿಸರಣ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ಮಕ್ಕಳಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶೀ ಪುತ್ತಿಗೆ ಮಠದ ದಿವಾನರಾದ ಶ್ರೀ ಪ್ರಸನ್ನ ಆಚಾರ್ಯ ಹಾಗೂ ಶ್ರೀ ನಾಗರಾಜ ಆಚಾರ್ಯರವರು, ಸುಗುಣ ಮಾಲಾ ಶಾಲೆಯ ಸಂಚಾಲಕ ಶ್ರೀ ಪ್ರಮೋದ ಸಾಗರ, ಶಾಲಾ ವಿದ್ಯಾರ್ಥಿ ವ್ರಂದ, ಅನಂತ ವಿಪ್ರ ಬಳಗದ ಸದಸ್ಯರು,
ಜೀರ್ಣೋದ್ದಾರ ಸಮಿತಿ ಸದಸ್ಯರು ಹಾಜರಿದ್ದರು. ದೇವಾಲಯದ ಹೊರಾಂಗಣದಲ್ಲಿ ಮಾವು, ಹಲಸು, ನೇರಳೆ, ಗೇರು, ಪುನರ್ಪುಳಿ, ಬಿಲ್ವ ಪತ್ರೆ, ತುಳಸೀ, ಮಲ್ಲಿಗೆ ಹಾಗೂ ವಿವಿಧ ಬಗೆಯ ಹೂ ಗಿಡಗಳನ್ನು ನೆಡಲಾಯಿತು. ಅನಂತ ವಿಪ್ರ ಬಳಗದ ಕೆ.ರಾಘವೇಂದ್ರ ಭಟ್ ಸ್ವಾಗತಿಸಿ, ಪುತ್ತಿಗೆ ಮಠದ ಶೀ ಪ್ರಸನ್ನಾಚಾರ್ಯರು ಪರಿಸರ ದಿನಾಚರಣೆಯ ಮಹತ್ವ ತಿಳಿಸಿದರು.

LEAVE A REPLY

Please enter your comment!
Please enter your name here