ಏ.07-09ರವರೆಗೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ಹಲೇರ ಪಂಜುರ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನ ಟ್ರಸ್ಟ್‌ (ರಿ.) ಕೊಳಕೆ,ಇರ್ವತ್ತೂರು ವರ್ಷಾವಧಿ ನೇಮೋತ್ಸವ

0
11

ಕಾರ್ಕಳ : ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ಹಲೇರ ಪಂಜುರ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನ ಟ್ರಸ್ಟ್‌ (ರಿ.) ಕೊಳಕೆ,ಇರ್ವತ್ತೂರು ಏ.07-09ರವರೆಗೆ ವರ್ಷಾವಧಿ ನೇಮೋತ್ಸವ ನಡೆಯಲಿದೆ.

ಕಾರ್ಯಕ್ರಮಗಳು

ದಿನಾಂಕ 07-04-2026ನೇ ಮಂಗಳವಾರ ಬೆಳಿಗ್ಗೆ ಗಂಟೆ 10.00ಕ್ಕೆ ಗಣಹೋಮ ಹಾಗೂ ದೈವಗಳ ಶುದ್ದೀಕರಣ,ಸಾಯಂಕಾಲ ಗಂಟೆ 6.00ಕ್ಕೆ ದೈವಗಳ ಭಂಡಾರ ದೈವಸ್ಥಾನಕ್ಕೆ ಆಗಮನ ರಾತ್ರಿ ಗಂಟೆ 8.00ಕ್ಕೆ ಧರ್ಮರಸು ಪಂಜುರ್ಲಿ ದೈವದ ನೇಮೋತ್ಸವ, ರಾತ್ರಿ ಗಂಟೆ 11.00ಕ್ಕೆ ಮಹಾಕಾಳಿ ದೈವದ ನೇಮೋತ್ಸವ ನಡೆಯಲಿರುವುದು.

ದಿನಾಂಕ 08-04-2026ನೇ ಬುಧವಾರ ಸಾಯಂ.ಗಂಟೆ 6.00ರಿಂದ 8.00ರವರೆಗೆ ಶ್ರೀ ವೇಣುಗೋಪಾಲಕೃಷ್ಣ ಭಜನಾ ಮಂಡಳಿ ಕೊಳಕೆ ಇರ್ವತ್ತೂರು ಇವರಿಂದ “ಭಜನಾ ಕಾರ್ಯಕ್ರಮ” ನಡೆಯಲಿದೆ. ರಾತ್ರಿ ಗಂಟೆ 8.00ಕ್ಕೆ ಬ್ರಹ್ಮ ಮುಗೇರ ದೈವಗಳ ನೇಮೋತ್ಸವ, ರಾತ್ರಿ ಗಂಟೆ 11.00ಕ್ಕೆ ತನ್ನಿಮಾನಿಗ ದೈವದ ನೇಮೋತ್ಸವ ಜರಗಲಿದೆ.

ದಿನಾಂಕ 09-04-2026ನೇ ಗುರುವಾರ ಬೆಳಿಗ್ಗೆ ಗಂಟೆ 8.00ಕ್ಕೆ ಕೊರಗಜ್ಜ ದೈವದ ನೇಮೋತ್ಸವ,ಬೆಳಿಗ್ಗೆ ಗಂಟೆ 11.00ಕ್ಕೆ ಹಲೇರ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 1.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು.

LEAVE A REPLY

Please enter your comment!
Please enter your name here