ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ ಕಲ್ಪೋಕ್ತ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗಣೇಶ ಸರಳಾಯ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಅವರು ದೀಪ ಪ್ರಜ್ವಲಿಸಿ ಪೂಜೆಗೆ ಚಾಲನೆ ನೀಡಿದರು. ಕಿಕ್ಕಿರಿದು ತುಂಬಿದ ಭಕ್ತ ಸಮೂಹಕ್ಕೆ ಶ್ರೀ ವರಮಹಾಲಕ್ಷ್ಮಿ ವ್ರತ ಕಲ್ಪೋಪ್ತ ಪೂಜೆಯ ಮಹತ್ವವನ್ನು ಪ್ರಾಜ್ಞ ಸುಧೀರ್ ಮರಾಠೆ ಸಂಕ್ಷಿಪ್ತವಾಗಿ ವಿವರಿಸಿದರು
ಸಾಮೂಹಿಕವಾದ ಕುಂಕುಮ ಅರ್ಚನೆ, ಕಲಶ ಪ್ರೋಕ್ಷಣಾದಿಗಳು ನೆರವೇರಿದವು.. ಬ್ರಾಹ್ಮಣ ಸುವಾಸಿನಿ ಆರಾಧನೆ ಪ್ರಸನ್ನ ಪೂಜೆ ಮಹಾಪೂಜೆ ಪ್ರಸಾದ ವಿತರಣೆ ಮಹಾ ಅನ್ನಸಂತರ್ಪಣೆಗಳು ನೆರವೇರಿದವು..
ಶ್ರೀನಿವಾಸ ಹೆಕ್ಕಡ್ಕ, ವಿಜಯೇಂದ್ರಮೇಲಂಟ, ಹೇರ್ಗ ಗಣೇಶ್ ಭಟ್ ಪೂಜೆಯಲ್ಲಿ ಸಹಕರಿಸಿದರು. ವೇದಮೂರ್ತಿ ವಿಕ್ಯಾತ್ ಭಟ್ ಮೇಲುಸ್ತುವಾರಿ ವಹಿಸಿದ್ದರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
Home Uncategorized ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ಶ್ರೀ ವರಮಹಾಲಕ್ಷ್ಮಿ ಪೂಜೆ ಸಂಪನ್ನ