ಶ್ರೀ ಧರ್ಮರಸು ಶ್ರೀ ಕೊಡಮಣಿತ್ತಾಯಿ ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ ಅತ್ತೂರು ಬೇರಂದೊಟ್ಟು ವಾರ್ಷಿಕ ನೇಮೋತ್ಸವ ಸಂಪನ್ನ

0
6

ಶ್ರೀ ಧರ್ಮರಸು ಶ್ರೀ ಕೊಡಮಣಿತ್ತಾಯಿ ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ ಅತ್ತೂರು ಬೇರಂದೊಟ್ಟು ವಾರ್ಷಿಕ ನೇಮೋತ್ಸವ ದಿನಾಂಕ ಮಾರ್ಚ್ 17 ರಿಂದ ಮೊದಲ್ಗೊಂಡು ಮಾರ್ಚ್ 22 ರ ತನಕ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಅನ್ನ ಸಂತರ್ಪಣೆ ಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಗಳು ಮತ್ತು ವಿವಿಧ ಭಜನಾ ಮಂಡಳಿಗಳ ವತಿಯಿಂದ ಕುಣಿತ ಭಜನೆ , ಚಂಡೆ ಬಳಗದವರಿಂದ ಚೆಂಡೆ ವಾದನ, ಕೊಂಬು ಕಹಳೆ ವಾದ್ಯ, ಬ್ಯಾಂಡ್ ಸೆಟ್ ಡೋಲು ಇತ್ಯಾದಿ ವಾದ್ಯಗಳ ಇಂಪು ದೈವಗಳ ಸಿರಿ ಸಿಂಗಾರದ ನೇಮೋತ್ಸವ ಕ್ಕೆ ಮೆರಗನ್ನು ಉಂಟು ಮಾಡಿತು.

ಅನ್ನ ಸಂತರ್ಪಣೆ ಯ ಕುರಿತು ಪಾಕ ಶಾಲೆಯ ಗುರುರಾಜ್ ಭಟ್ ಅತ್ತೂರು ಮಾಹಿತಿ ನೀಡಿದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ದೈವಗಳ ನೇಮೋತ್ಸವದಲ್ಲಿ ಪ್ರಸಾದ ಸ್ವೀಕರಿಸಿದರು. ಗರಡಿ ಫ್ರೆಂಡ್ಸ್ ಮತ್ತು ಗ್ರಾಮಸ್ಥರು ಗುತ್ತು ಬರ್ಕೆ ಯವರ ಸಹಕಾರ ಹಾಗೂ ಊರ ಪರ ಊರ ದಾನಿಗಳ ಸಹಕಾರದಿಂದ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ವಾಸುದೇವ ಭಟ್ ಮತ್ತು ಮಾಧವ ಭಟ್ ರವರ ಪೌರೋಹಿತ್ಯದಲ್ಲಿ ಧಾರ್ಮಿಕ ಪೂಜಾ ವಿಧಿಗಳು ನಡೆಯಿತು.

LEAVE A REPLY

Please enter your comment!
Please enter your name here