ಇತಿಹಾಸ ಪ್ರಸಿದ್ಧ ಕಾರಣೀಕದ ಕ್ಷೇತ್ರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾರ್ಚ್ 14 ರಿಂದ 21ರ ವರೆಗೆ ಜರಗಲಿದೆ. ಮಾರ್ಚ್ 14 ಶನಿವಾರ ಬೆಳಿಗ್ಗೆ ಧ್ವಜಾರೋಹಣ, ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 01-00ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 07-00ರಿಂದ ಊರ ಆಯನ, ಉತ್ಸವ ಬಲಿ ಜರಗಲಿದೆ. ರಾತ್ರಿ ಗಂಟೆ 08-30ರಿಂದ ಹೊಸಮಾರು ವಠಾರದಲ್ಲಿರುವ ರಂಗಮAದಿರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಪ್ರಯೋಜಕತ್ವದಲ್ಲಿ ಕಿನ್ನಿಗೋಳಿ ವಿಜಯ ಕಲಾವಿದರು ಅಭಿನಯಿಸುವ ತುಳು ಸಾಂಸಾರಿಕ ತುಳು ನಾಟಕ “ಅಮ್ಮು ಆಮುಂಡರಾ…? ನಡೆಯಲಿದೆ.
ಮಾರ್ಚ್ 15 ಆದಿತ್ಯವಾರ ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ರಾತ್ರಿ ತಪ್ಪಂಗಾಯಿ ಬಲಿ ಜರಗಲಿದೆ. ರಾತ್ರಿ ಗಂಟೆ 08-30ರಿಂದ ಹೊಸಮಾರು ವಠಾರದಲ್ಲಿರುವ ರಂಗಮಂದಿರದಲ್ಲಿ ಹೊಸಮಾರು ಹಳೆವಿದ್ಯಾರ್ಥಿ ಸಂಘದ ಪ್ರಯೋಜಕತ್ವದಲ್ಲಿ ಉಡುಪಿ ಅಭಿನಯ ಕಲಾವಿದರು ಅಭಿನಯಿಸುವ ಕುತೂಹಲಭರಿತ ತುಳು ಹಾಸ್ಯಮಯ ನಾಟಕ “ಶಾಂಭವಿ” ನಡೆಯಲಿದೆ.
ಮಾರ್ಚ್ 16 ಸೋಮವಾರ ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 01-00ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 07-00ರಿಂದ ಉತ್ಸವ ಬಲಿ, ಮೂಡುಸವಾರಿ ಉತ್ಸವ, ಅಬ್ಬನಡ್ಕದಲ್ಲಿ ಕಟ್ಟೆಪೂಜೆ ಜರಗಲಿದೆ. ರಾತ್ರಿ ಗಂಟೆ 07-00ರಿಂದ ಹೊಸಮಾರು ವಠಾರದಲ್ಲಿರುವ ರಂಗಮAದಿರದಲ್ಲಿ ಬೆಳ್ಮಣ್ಣು ಪೈ ಹೋಮ್ ಪ್ರೊಡಕ್ಟ್ ಮಾಲಕರಾದ ಸದಾಶಿವ ಪೈ ಅವರ ಪ್ರಯೋಜಕತ್ವದಲ್ಲಿ ಖ್ಯಾತ ಸಂಗೀತ ಕಲಾವಿದರಿಂದ “ಸಂಗೀತ ಗಾನ ಸಂಭ್ರಮ” ಕಾರ್ಯಕ್ರಮ ಜರಗಲಿದೆ.
ಮಾರ್ಚ್ 17 ಮಂಗಳವಾರ ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 01-00ರಿಂದ ಅನ್ನಸಂತರ್ಪಣೆ, ರಾತ್ರಿ ಸಿರಿ ಭೂತ ಬಲಿ, ಕವಾಟ ಬಂಧನ, ಶಯನ ಪೂಜೆ ಜರಗಲಿದೆ. ರಾತ್ರಿ ಗಂಟೆ 07-00ರಿಂದ ಹೊಸಮಾರು ವಠಾರದಲ್ಲಿರುವ ರಂಗಮAದಿರದಲ್ಲಿ ಬೆಳ್ಮಣ್ಣು ಅಕ್ಷಯ ಜ್ಯುವೆಲ್ರ‍್ಸ್ ಮಾಲಕರಾದ ಆದರ್ಶ್ ಆಚಾರ್ಯ ಅವರ ಪ್ರಯೋಜಕತ್ವದಲ್ಲಿ ಮಂಗಳೂರು ಉರ್ವ ಚಿಲಿಂಬಿ ಸಾಯಿಶಕ್ತಿ ಕಲಾಬಳಗದವರು ಅಭಿನಯಿಸುವ “ಜೋಡು ಜೀಟಿಗೆ” ತುಳು ಜನಪದ ನಾಟಕ ಜರಗಲಿದೆ.
ಮಾರ್ಚ್ 18 ಬುಧವಾರ ಬೆಳಿಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಆರಾಟ ಮಹೋತ್ಸವ ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 01-00ರಿಂದ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 04-00ರಿಂದ ಓಕುಳಿ ಕಟ್ಟೆಪೂಜೆ ಆರಂಭ, ರಾತ್ರಿ ಅವಭೃಥೋತ್ಸವ ಜರಗಲಿದೆ.
ಮಾರ್ಚ್ 19 ಗುರುವಾರ ಧ್ವಜಾವರೋಹಣ , ಮಾರ್ಚ್ 20 ಶುಕ್ರವಾರ ಬೆಳಿಗ್ಗೆ ಶತರುದ್ರಾಭಿಷೇಕ, ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ 01-00ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 07-00ರಿಂದ ದೇವರ ಬಲಿ ಆರಂಭ ನಂತರ ಮಹಾರಂಗ ಪೂಜಾ ಮಹೋತ್ಸವ ಜರಗಲಿದೆ.
ಮಾರ್ಚ್ 21 ಶನಿವಾರ ರಾತ್ರಿ ಗಂಟೆ 07-00ರಿಂದ ಪಂಚ ದೈವಗಳ ನೇಮೋತ್ಸವ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇ|ಮೂ| ಬಿ.ಕೆ. ವಿಘ್ನೇಶ್ ಭಟ್‌ರವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

