ಮೂಡುಬಿದಿರೆ ತಾಲೂಕಿನ ಮಾರ್ಪಾಡಿ ಗ್ರಾಮದ ಏದಾಡಿ ಯ ಪ್ರಸನ್ನ ತಂತ್ರಿಯವರ ವಾರಾಹಿ ಕ್ರಿಯೇಶನ್ಸ್ ರವರು ಮಂಗಳಾಪುರಂ ಎನ್ನುವ ಕನ್ನಡ ಚಿತ್ರದ ಚಿತ್ರೀಕರಣದ ಆರಂಭವನ್ನು ಆಗಸ್ಟ್ 29ರಂದು ಬೆಳಿಗ್ಗೆ ಅಲಂಗಾರು ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಸಿದ್ದಾರೆ.
ಮೂಡುಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಯಾಮರಾ ಚಾಲೂ ಮಾಡಿ ಶುಭ ಹಾರೈಸಿದರು. ಇಡೀ ಚಿತ್ರ ತಂಡದ ಶ್ರಮ ಸಾರ್ಥಕಗೊಂಡು, ಸಾಕಷ್ಟು ಉತ್ತೇಜನ ದೊರೆಯಲಿ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವ ಆರಂಭದ ಕ್ಲಾಪ್ ಮೂಲಕ ಸಿನೆಮಾಕ್ಕೆ ಚಾಲನೆ ನೀಡಿ ಅಭಿನಂದಿಸಿದರು.
ರಿಷಿ ಹಾಗೂ ಅಭಿಮನ್ಯು ಅಭಿನಯಿಸುವ ಚಿತ್ರಣದಲ್ಲಿ ಗೌತಮಿ ಜಾದವ್, ಪ್ರಕಾಶ್ ಬೆಳವಾಡಿ, ವೈದ್ಯನಾಥ ಬಿರಾದರ್, ದೀಪಕ್ ರೈ, ಅವಿನಾಶ್, ಪುಷ್ಪರಾಜ್, ದೇವದಾಸ್ ಕಾಪಿಕಾಡ್, ರಾಮದಾಸ್ ಕೂಡ ಅಭಿನಯಿಸಲಿದ್ದಾರೆ.
ಅಭಿಷೇಕ್ ರ ಛಾಯಾಗ್ರಹಣ, ಅನುಪ್ ರ ಸಂಗೀತ, ಜನಾರ್ಧನ್ ರ ಕಲಾ ನಿರ್ದೇಶನ, ಸತೀಶ್ ಚಂದ್ರಯ್ಯ ರವರ ಸಂಕಲನ, ಶಿಲ್ಪ ಹೆಗಡೆ ವಸ್ತ್ರ ವಿನ್ಯಾಸ, ಅಗ್ನಿ ರಾಜ್ ರ ನಿರ್ಮಾಣ ಮತ್ತು ನಿರ್ವಹಣೆ, ಸಹ ನಿರ್ದೇಶನ ಮಧು ಕೆ ಡಿ, ಮಣಿ ಭೂಪತಿ, ಸಹಾಯಕ ನಿರ್ದೇಶಕರು ಶಿವಪ್ರಸಾದ್, ಗಿರೀಶ್, ಲೋಕೇಶ್ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಲಂಗಾರು ಈಶ್ವರ ಭಟ್, ಅರಮನೆ ಕುಲದೀಪ್ ಎಂ, ಉದ್ಯಮಿ ಶ್ರೀಪತಿ ಭಟ್, ಬೊಕ್ಕಸ ಚಂದ್ರಶೇಖರ್ ರಾವ್, ನಿರ್ಮಾಪಕರುಗಳಾದ ಪ್ರಸನ್ನ ತಂತ್ರಿ, ರಾಮ್ ಪ್ರಸಾದ್, ರಂಜಿತ್ ರಾಜ್ ಸುವರ್ಣ, ದೇವಾನಂದ ಭಟ್ ಉಪಸ್ಥಿತರಿದ್ದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ