ಶ್ರೀ ಗೋಪಾಲಕೃಷ್ಣ ಕಲಾ ತಂಡ ಉಳ್ಳೂರು 11 ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಳ್ಳೂರ್ 11 ರೈತ ಸಿರಿ ಸ್ವ ಸಹಾಯ ಸಂಘಗಳ ಸಯುಕ್ತ ಆಶಯದಲ್ಲಿ ನಡೆದ ನಾಲ್ಕನೇ ವರ್ಷದ ಗೋಕುಲಾಷ್ಟಮಿಯನ್ನು ರಘುರಾಮ ಶೆಟ್ಟಿ ಸನಾತನ ಕಲಾವೇdiಕೆಯಲ್ಲಿ ಸಡಗರ ಸಂಭ್ರಮದಲ್ಲಿ ನಡೆಯಿತು
ಶ್ರೀ ಗೋಪಾಲ ಕೃಷ್ಣ ದೇವರಿಗೆ ತುಳಸಿ ಅರ್ಚನೆ, ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ, ಅನ್ನಸಂತರ್ಪಣೆ ಸೇವೆಯನ್ನು ನೆರವೇರಿಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ ಸ್ಪರ್ಧೆ, ಪುರುಷ ಹಾಗೂ ಮಹಿಳೆಯರಿಂದ ಮೊಸರು ಕುಡಿಕೆ,ಭಜನಾ ಕಾರ್ಯಕ್ರಮ, ಭಕ್ತಿ ಗೀತೆ, ನೃತ್ಯ ಕಾರ್ಯಕ್ರಮ ಜರುಗಿರು. ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು, ಅನ್ನದಾನಿ ಲಿಂಗಯ್ಯ ಶೆಟ್ಟಿಯವರನ್ನ ಗೌರವಿಸಲಾಯಿತು. ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ವೇಷ ತೊಡಿಸಿ ಸಂಭ್ರಮಿಸಿದರು.
ಕಂಬದಕೋಣೆ ರೈತ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಮೂಡು ಮಠ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ಪೂಜಾ ಕೈಂಕರ್ಯಗಳನ್ನು ಸಂಪ್ರದಾಯ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಯುವಕರ ತಂಡದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಮುಂದಿ ದಿನಗಳಲ್ಲಿ ಊರಿನವರ ಸಹಕಾರದಿಂದ ಮುಂದುವರೆಯುವಂತೆ ಆಗಲಿ ಎಂದು ಶುಭ ಹಾರೈಸಿದರು.
ದಿನೇಶ್ ಆಚಾರ್ಯ ಕಾರ್ಯಕ್ರಮ ಮುಂದಾಳತ್ವವನ್ನು ವಹಿಸಿ ಮಾತನಾಡಿ, ಕೃಷ್ಣ ಜನ್ಮಾಷ್ಟಮಿ ಹಾಗೂ ರಘುರಾಮ ಶೆಟ್ಟಿ ಸನಾತನ ಕಲಾವೇದಿಕೆ ನಿರ್ಮಾಣಕ್ಕೆ ಸಹಕರಿಸಿದ ರಾಘವೇಂದ್ರ ಶೆಟ್ಟಿ , ಚಂದ್ರೇಶ್ ಶೆಟ್ಟಿ ಸನಾತನ ಹಾಗೂ ಅವರ ಮನೆಯವರು ಹಾಗೂ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ದಾನಿಗಳಿಗಳೂ, ಗ್ರಾಮಸ್ಥರಿಗೂ ಧನ್ಯವಾದವನ್ನು ಸಲ್ಲಿಸಿದರು.
ಗೋಪಾಲ ಉಡುಪರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸೂಲಿಯಣ್ಣಾ ಶೆಟ್ಟಿ ,ಪ್ರದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ ಕಿರಿಮಂಜೇಶ್ವರ, ಸೀತಾರಾಮ್ ಶೆಟ್ಟಿ ಮುಕ್ತೇಸರರು ಕೊಗಳುಮಕ್ಕಿ ನಂದಿಕೇಶ್ವರ ದೇವಸ್ಥಾನ ಉಳ್ಳೂರ್ 11, ಭುಜಂಗ ಶೆಟ್ಟಿ ಕೋಕನಾಡು, ಲಿಂಗಯ್ಯ ಶೆಟ್ಟಿ ಸೇನಾಪುರ ಮನೆ, ರಾಘವೇಂದ್ರ ಶೆಟ್ಟಿ ಸನಾತನ, ಗೋಪಾಲ ಪೂಜಾರಿ ಪಡುಮನೆ, ಗಣೇಶ್ ದೇವಾಡಿಗ ಹಾಡಿಮನೆ, ರಾಘವೇಂದ್ರ ಶೆಟ್ಟಿ ನಾರ್ಕಳಿ ಮನೆ ,ಶಂಕರ ಗಾಣಿಗ ಮಾಜಿ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಉಳ್ಳೂರು 11 ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

