ಶ್ರೀ ಗುರು ರಾಘವೇಂದ್ರ ಮಠ ಬನ್ನಡ್ಕ ಮೂಡಬಿದಿರೆ ಇದರ ನೇತೃತ್ವದಲ್ಲಿ ಉದ್ಘಾಟನೆಗೊಂಡ ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಬನ್ನಡ್ಕ ತಂಡದ ವತಿಯಿಂದ ಭಜನಾ ತಂಡದ ಮಕ್ಕಳಿಗೆ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ವಿದ್ಯಾನಿಧಿ ಮತ್ತು ಮಂಡಳಿಯ ಗುರುಗಳಾದ ವಿಜಯ್ ನೀರ್ಕೆರೆ ಇವರಿಗೆ ಗುರುವಂದನಾ ಕಾರ್ಯಕ್ರಮ ನಳಿನಾಕ್ಷಿ ಸಭಾ ಭವನ ಬನ್ನಡ್ಕ ಇಲ್ಲಿ ನಡೆಯಿತು. ಹಾಗೆಯೇ ನಮ್ಮ ಇತಿಹಾಸವುಳ್ಳ ಪುಣ್ಯಸ್ಥಳಗಳ ಮಹತ್ವ ಮಕ್ಕಳಿಗೆ ತಿಳಿಯಬೇಕು ಎಂಬ ನಿಟ್ಟಿನಲ್ಲಿ ಮಕ್ಕಳಿಗಾಗಿ ಭಕ್ತಿ ಹೆಜ್ಜೆ ಶೈಕ್ಷಣಿಕ ಪ್ರವಾಸ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಯಿತು.

ಅತಿಥಿಗಳಾಗಿ ದಯಾನಂದ್.ಪೈ ಗೌರಾಧ್ಯಕ್ಷರು ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ, ಪ್ರಜ್ವಲ್ ಆಚಾರ್ಯ ಮಾಲೀಕರು SKF ಎಲಿಕ್ಸರ್ ಇಂಡಿಯಾ ಪ್ರೈ,ಲಿ ಬನ್ನಡ್ಕ, ವಾಸುದೇವ ಭಟ್ ಅಧ್ಯಕ್ಷರು ಗ್ರಾಮ ಪಂಚಾಯತ್ ಪಡುಮಾರ್ನಾಡು, ಸೂರಜ್ ಜೈನ್ ಉದ್ಯಮಿ, ಮಹಾಶೇಷ ಭಟ್ ಅರ್ಚಕರು ರಾಘವೇಂದ್ರ ಮಠ, ಶ್ರೀಮತಿ ಭವ್ಯ ಸತೀಶ್ ಕೋಟ್ಯಾನ್ ಮಹಿಳಾ ಮಂಡಳಿ ಅಧ್ಯಕ್ಷರು, ಮಧುಸೂದನ್ ಅಧ್ಯಕ್ಷರು ಯುವ ಬಿರುವೆರ್ ಮಾಂಟ್ರಾಡಿ. ಗಣೇಶ್ ಅಲಿಯೂರು ನಿರೂಪಿಸಿದರು, ಅನುಷಾ ಸ್ವಾಗತಿಸಿದರು, ಕೃಪಾ ಧನ್ಯವಾದ ಸಲ್ಲಿಸಿದರು.
ಸತೀಶ್ ಸಂಚಾಲಕರು, ರಾಜೇಶ್ ಕಾಮತ್, ದಿನೇಶ್ ಆಚಾರ್ಯ, ನಿತಿನ್ ಕೋಟ್ಯಾನ್, ನಿತಿನ್ ಪೂಜಾರಿ, ಮೋಹನ್ ಆಚಾರ್ಯ, ಪ್ರವೀಣ್ ತರಬೇತುದಾರರು ಉಪಸ್ಥಿತರಿದ್ದರು.