ಮೂಡುಬಿದಿರೆ :ಅವಿಭಜಿತ ದ.ಕ ಜಿಲ್ಲೆ ಮಾತ್ರವಲ್ಲದೇ ಮುಂಬೈ, ಹೊರೆ ಜಿಲ್ಲೆಗಳಲ್ಲಿ ಬಿಲ್ಲವ ಸಮಾಜವು ಪ್ರಾರಂಭಿಸಿದ ಸಹಕಾರಿ ಕ್ಷೇತ್ರಗಳು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಅದರಲ್ಲಿ ವಿಶೇಷವಾಗಿ ಶ್ರೀ ಗುರುದೇವ ಸಹಕಾರಿ ಸಂಘವು ಸಹಕಾರಿ ಕ್ಷೇತ್ರ ಹಾಗೂ ಗ್ರಾಹಕರ ಆರ್ಥಿಕ ಅಭಿವೃದ್ಧಿಗೆ ಕೂಡ ತನ್ನದೇ ಕೊಡುಗೆಯನ್ನು ನೀಡುತ್ತಿದೆ. ಸಮರ್ಥ ಆಡಳಿತ ವ್ಯವಸ್ಥೆ, ಗ್ರಾಹಕಸ್ನೇಹಿ ಸೇವೆಯಿಂದ ಸಂಸ್ಥೆಯು ಮುನ್ನಡೆಯುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.
ಶ್ರೀ ಗುರುದೇವ ವಿವಿಧೋದ್ದೋಶ ಸಹಕಾರ ಸಂಘದ 26ನೇ ಶಾಖೆಯನ್ನು ಮೂಡುಬಿದಿರೆ ಜೈನಪೇಟೆ ಬಳಿಯಿರುವ ರಿಷಿಕಾ ಟರ‍್ಸ್ನಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಉಮಾನಾಥ ಎ.ಕೋಟ್ಯಾನ್ ಕಚೇರಿ ಉದ್ಘಾಟಿಸಿ, ಮೂಡುಬಿದಿರೆ ಶಿಕ್ಷಣ, ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ತಾಲೂಕು. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀ ಗುರುದೇವ ಸಹಕಾರಿಯ ಒಟ್ಟು ನಾಲ್ಕು ಶಾಖೆಗಳಿವೆ. ಸಂಸ್ಥೆಯ ಬೆಳವಣಿಗೆ ಆಡಳಿತ ಮಂಡಳಿಯ ಸಮರ್ಥನೆ ಚುಕ್ಕಾಣಿ ಮಾತ್ರವಲ್ಲದೆ ಸಿಬ್ಬಂದಿ ವರ್ಗದ ನಗುಮೊಗದ ಗ್ರಾಹಕ ಸ್ನೇಹಿ ಸೇವೆಯ ಮೇಲೆ ಅವಲಂಬಿತವಾಗಿದೆ. ಸಹಕಾರಿ 26 ಶಾಖೆಗಳಲ್ಲಿ ಮೂಡುಬಿದಿರೆ ನಂ.1 ಶಾಖೆಯಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಭದ್ರತಾ ಕೊಠಡಿ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಭದ್ರತಾ ಕೋಶ, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ ಗಣಕಯಂತ್ರ ಉದ್ಘಾಟಿಸಿದರು. ಉದ್ಯಮಿ ಭಾನುಮತಿ ಶೀನಪ್ಪ ನಿರಖು ಠೇವಣಿ ಸರ್ಟಿಫಿಕೇಟ್, ಉದ್ಯಮಿ ಕೆ.ಶ್ರೀಪತಿ ಭಟ್ ಉಳಿತಾಯ ಖಾತೆ ಪುಸ್ತಕ ವಿತರಿಸಿದರು. ರಿಷಿಕಾ ಟವರ್ಸ್ ಮಾಲಕ ಸನ್ಮತ್ ಸುವರ್ಣ ಅವರನ್ನು ಗೌರವಿಸಲಾಯಿತು. ಮೂಡುಬಿದಿರೆ ಶಾಖೆ ಪ್ರಾರಂಭಿಸಲು ಸಹಕರಿಸಿದವರನ್ನು ಗೌರವಿಸಲಾಯಿತು.
ಸಹಕಾರಿಯ ಉಪಾಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆವಹಿಸಿದರು. ನಮ್ಮ ಸಹಕಾರಿಯು 8 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಆಡಳಿತ ಮಂಡಳಿ ಬರೀ ಲಾಭವನ್ನು ನೋಡದೆ, ಬಂದ ಲಾಭದಲ್ಲಿ ಸಮಾಜಿಕ ಕಾರ್ಯಗಳಿಗೆ ಮಾಡುತ್ತಿದೆ. ಆಡಳಿತ ಮಂಡಳಿಯ ನಿರ್ದೇಶಕರು ತಮಗೆ ಸಿಗುವ ಗೌರವಧನವನ್ನು ಅರಿವು ಠೇವಣಿಯ ಮೂಲಕ ನೀಡುತ್ತಿದ್ದಾರೆ. ಪ್ರತಿ ವರ್ಷ ಓರ್ವ ಇಂಜಿನಿಯರಿAಗ್ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಂಡು, ಅವರ ನಾಲ್ಕು ವರ್ಷ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಸಹಕಾರಿ ಭರಿಸುತ್ತಿದೆ. ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಅಭ್ಯುದಯ', ಪಿಂಚಣಿ ಯೋಜನೆಗಾಗಿ
ಆಸರೆ’ ಠೇವಣಿ ಯೋಜನೆ ಮುಖಾಂತರ ಸಹಕಾರಿ ಸಾಮಾಜಿಕ ಬದ್ಧತೆಯನ್ನು ಮೆರೆಯುತ್ತಿದೆ ಎಂದರು.
ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಪಿ.ಕೆ ಥೋಮಸ್, ಸುರೇಶ್ ಕೋಟ್ಯಾನ್, ಶ್ವೇತಾ ಪ್ರವೀಣ್, ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್., ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ, ಸುರೇಶ್ ಪ್ರಭು, ಬಿಜೆಪಿ ದ.ಕ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ರೋಟರಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ, ಉದ್ಯಮಿ ನಾರಾಯಣ ಪಿ.ಎಂ, ಉದ್ಯಮಿ ಅಬುಅಲಾ ಪುತ್ತಿಗೆ ಮುಖ್ಯ ಅತಿಥಿಯಾಗಿದ್ದರು.i
ನಿರ್ದೇಶಕ ಜಗದೀಶ್ಚಂದ್ರ ಡಿ.ಕೆ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಧರಣೇoದ್ರ ಕುಮಾರ್ ವಂದಿಸಿದರು.