ಶ್ರೀ ಕೃಷ್ಣ ಭಜನಾಮಂದಿರ (ರಿ.) ಕರಾಯ: ಮಕ್ಕಳಿಗೆ ಒಂದು ವಾರದ ಕುಣಿತ ಭಜನಾ ತರಬೇತಿ

0
79

ಶ್ರೀ ಕೃಷ್ಣ ಭಜನಾ ಮಂದಿರ (ರಿ.) ಕರಾಯ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ.) ಗುರುವಾಯನಕೆರೆ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾಪರಿಷತ್ ತಣ್ಣಿರುಪಂತ ವಲಯ ಇವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಭಜನಾಮಂದಿರ (ರಿ.) ಕರಾಯ ಇಲ್ಲಿ ಮಕ್ಕಳಿಗೆ ಒಂದು ವಾರದ ಕುಣಿತ ಭಜನಾ ತರಬೇತಿಯನ್ನು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನ ಕರಾಯದ ಆಡಳಿತ ಮೊಕ್ತೇಸರರಾದ ಅನಂತಕೃಷ್ಣ ಕುದ್ದನಾಯ ದೀಪ ಪ್ರಜ್ವಲನೆ ಮಾಡುವುದರ ಮುಖಾಂತರ ಉದ್ಘಾಟಿಸಿ,
ಶುಭ ಹಾರೈಸಿದರು,
ಮುಖ್ಯ ಅತಿಥಿಗಳಾದ ನಿವೃತ ಸರ್ಕಲ್ ಇನ್ಸ್ಪೆಕ್ಟರ್ ಆದ ಸುದರ್ಶನ್ ಕೊಲ್ಲಿ ಮಾತಾನಾಡುತ್ತ ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಭಜನೆ ನಡೆಯುತ್ತ ಇತ್ತು ಆದ್ರೆ ಇಂದಿನ ಕಾಲದಲ್ಲಿ ಭಜನೆ ಮಾಡುವ ಮನೆಗಳು ಸಿಗುವುದು ಬಹಳ ವಿರಳ ಎಂದರು ,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾಯದ ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾದ ಜಗದೀಶ ಶೆಟ್ಟಿ ಮೈರ, ಮಾತಾಡಿ ಭಜನೆ ಮಾಡಿದಲ್ಲಿ ವಿಭಜನೆ ಇಲ್ಲ ಎಂಬ ಸಂದೇಶವನ್ನು ನೀಡಿದರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಅಶೋಕ್ ಹಿರಿಯರಾದ ಗೋಪಾಲಕೃಷ್ಣ ಪೈ, ಭಜನಾಪರಿಷತ್ ನ ಸಮನ್ವಯಧಿಕಾರಿ ಸಂತೋಷ್, ಪಿ ಅಳಿಯೂರು ಭಜನಾ ತರಬೇತುದಾರರಾದ ಆಕಾಶ್ ಹಾಗೂ ಭಜನಾಪರಿಷತ್ ಪದಾಧಿಕಾರಿಗಳು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು, ನಿವೃತ್ತ ಶಿಕ್ಷಕರಾದ ಯುವರಾಜ್ ನಿರೂಪಿಸಿದರು ಮೇಲ್ವಿಚಾರಕರಾದ ವಿಶ್ವನಾಥ ಪೂಜಾರಿ ಸ್ವಾಗತಿಸಿ. ತಣ್ಣೀರುಪಂತ ವಲಯದ ವಲಯ ಅಧ್ಯಕ್ಷರಾದ ರಾಜಶೇಖರ್ ರೈ ವಂದಿಸಿದರು

LEAVE A REPLY

Please enter your comment!
Please enter your name here